ಅಫಜಲಪುರ: ತಾಲ್ಲೂಕು ಕೇಂದ್ರ ಅಫಜಲಪುರದಿಂದ ಆನೂರ್ ಮಾರ್ಗವಾಗಿ ದೇವಲ ಗಾಣಗಾಪುರಕ್ಕೆ ಸಂಚರಿಸುವ ಸುಮಾರು 18 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಯಾತ್ರಿಕರು ನಿತ್ಯ ಪರದಾಡುವಂತಾಗಿದೆ.
ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಅನೂರ್ ಮಾರ್ಗದಿಂದ ರಸ್ತೆ ಹದಗೆಟ್ಟಿರುವುದರಿಂದ ಯಾತ್ರಿಕರು ಚೌಡಾಪುರ್ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ 12 ಕಿ.ಮೀ ಅಧಿಕ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಇದೇ ರಸ್ತೆಯ ಮಾರ್ಗದಲ್ಲಿನ ಆನೂರು, ಬಿಲ್ವಾಡ, ತೆಲ್ಲೂರ ಗ್ರಾಮಗಳ ಜನರು ಸಂಚಾರ ಮಾಡಲು ನಿತ್ಯ ಪರದಾಡುತ್ತಿದ್ದಾರೆ.
‘ಆನೂರು ಮಾರ್ಗವಾಗಿ ದೇವರ ಗಾಣಗಾಪುರಕ್ಕೆ ಸಂಚಾರ ಮಾಡುವ 18 ಕಿ.ಮೀ ರಸ್ತೆಯನ್ನು ಪ್ರತಿವರ್ಷವೂ ದುರಸ್ತಿ ಮಾಡಲಾಗುತ್ತಿದೆ ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗುತ್ತಿದೆ. ಅಲ್ಲದೆ ರಸ್ತೆ ಕಿರಿದಾಗಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹೀಗಾಗಿ ಉತ್ತಮ ಗುಣಮಟ್ಟದ ಅಗಲವಾದ ರಸ್ತೆ ನಿರ್ಮಾಣ ಮಾಡಬೇಕು’ ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರ.
‘ ಬಿಲ್ವಾಡ್ ಬಿ ಗ್ರಾಮದ ಹತ್ತಿರದ ರಸ್ತೆಯಲ್ಲಿ ದೊಡ್ಡ ಗುಂಡಿಗಳಿದ್ದು, ಸಾಕಷ್ಟು ಅಪಘಾತಗಳಾಗುತ್ತಿವೆ. ನೂತನ ರಸ್ತೆ ನಿರ್ಮಾಣದವರೆಗೂ ತಾತ್ಕಲಿಕ ದುರಸ್ತಿ ಮಾಡಬೇಕು’ ಎನ್ನುತ್ತಾರೆ.
ರಸ್ತೆ ಸಂಪೂರ್ಣವಾಗಿ ದುರಸ್ತಿ ಮಾಡಲು ಸರ್ಕಾರಕ್ಕೆ ಕ್ರಿಯಾಯೋಜನೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ನಂತರ ಟೆಂಡರ್ ಕರೆದು ರಸ್ತೆ ದುರಸ್ತಿ ಮಾಡಲಾಗುದು
-ಲಕ್ಷ್ಮಿಕಾಂತ್ ಬಿರಾದಾರ, ಎಇಇ ಪಿಡಬ್ಲೂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.