ADVERTISEMENT

ಆಳಂದ; ಶಾಂತಿಯುವ ಹೋಳಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 2:08 IST
Last Updated 19 ಮಾರ್ಚ್ 2022, 2:08 IST
ಆಳಂದ ಪಟ್ಟಣ ಬಾಹೇರಪೇಟದಲ್ಲಿ ಯುವಕರು ಅಣುಕು ಶವದ ಮುಂದೆ ಬೊಬ್ಬೆ ಹಾಕಿ ಸಂಭ್ರಮಿಸಿದರು
ಆಳಂದ ಪಟ್ಟಣ ಬಾಹೇರಪೇಟದಲ್ಲಿ ಯುವಕರು ಅಣುಕು ಶವದ ಮುಂದೆ ಬೊಬ್ಬೆ ಹಾಕಿ ಸಂಭ್ರಮಿಸಿದರು   

ಆಳಂದ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಶಾಂತಿಯುತವಾಗಿ ಹೋಳಿ ಹಬ್ಬದ ಆಚರಣೆ ಜರುಗಿತು.

ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದುದ್ದರಿಂದ ಬಣ್ಣದೋಕಳಿಯ ಸಂಭ್ರಮ ಕಂಡು ಬರಲಿಲ್ಲ. ವಿವಿಧ ಬಡಾವಾಣೆಗಳಲ್ಲಿ ಯುವಕರು, ಮಕ್ಕಳು ಬಣ್ಣ ಎರಚಿ ಸಂಭ್ರಮಿಸಿದರು.

ಪಟ್ಟಣದ ನಾಯಕನಗರದಲ್ಲಿ ಲಂಬಾಣಿ ಸಮುದಾಯ ಬಾಂಧವರು ಸಂಪ್ರಾದಾಯಿಕ ಲಂಬಾಣಿ ನೃತ್ಯ, ಹಾಡು, ಕುಣಿತದೊಂದಿಗೆ ವಿಶಿಷ್ಟವಾಗಿ ಹೋಳಿ ಆಚರಿಸಿದರು.

ADVERTISEMENT

ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯ ಹಾಗೂ ಬಾಹೇರಪೇಟದಲ್ಲಿ ಯುವಕರು ಅಣಕು ಶವ ಮಾಡಿ ಹೋಳಿ ಹಬ್ಬದ ಆಚರಣೆಗೆ ಕಳೆ ತಂದರು.

ಸಂಗಾ ಕಾಲೋನಿ, ಸುಲ್ತಾನಪುರ ಗಲ್ಲಿ, ರೇವಣಸಿದ್ದೇಶ್ವರ ಕಾಲೋನಿ, ಶರಣನಗರ, ಹತ್ತ್ಯಾನಗಲ್ಲಿ, ರಾಮಮಂದಿರ, ದೇಶಮುಖ ಕಾಲೋನಿ ಮತ್ತಿತರ ಕಡೆ ಯುವಕರು, ಮಕ್ಕಳು ಬೆಳಗ್ಗೆಯಿಂದಲೇ ಬಣ್ಣದ ಓಕಳಿ ಹಿಡಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ತಾಲ್ಲೂಕಿನ ಮಾದನ ಹಿಪ್ಪರಗಿ, ಮಾಡಿಯಾಳ, ನಿಂಬರ್ಗಾ, ಸರಸಂಬಾ, ಹಿರೋಳಿ, ಪಡಸಾವಳಿ, ಖಜೂರಿ, ಹಳ್ಳಿ ಸಲಗರ, ತಡಕಲ, ರುದ್ರವಾಡಿ, ಕಡಗಂಚಿ, ನರೋಣಾ, ಯಳಸಂಗಿ, ಕೋರಳ್ಳಿ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮವ ಜೋರಾಗಿ ಕಂಡು ಬಂತು. ಎಳೆಯ ಮಕ್ಕಳಿಗೆ ಬತ್ತಾಸೆ ಸರ, ಬಣ್ಣದಲ್ಲಿ ಮಿಂದು ಕುಣಿಯುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.