ಕನಕಗಿರಿ: ಲೋಕ ಕಲ್ಯಾಣಾರ್ಥ ಅಧಿಕ ಮಾಸದ ನಿಮಿತ್ತ ಆಗಸ್ಟ್ 5, 6ರಂದು ಇಲ್ಲಿನ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ 33 ಸಾಮೂಹಿಕ ಪವಮಾನ ಹೋಮ ಆಯೋಜಿಸಲಾಗಿದೆ. ಅಧಿಕ ಮಾಸದ ಈ ಕಾರ್ಯಕ್ಕೆ ಅಧಿಕ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ಕಾರಣದಿಂದ ಶನಿವಾರದಂದು ಪವಮಾನ ಹೋಮ, ಸಂಜೆ 6 ಗಂಟೆಗೆ ಗಾಯಕ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಗರುಡೋತ್ಸವ ನಡೆಯುವುದು.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಅಧಿಕಮಾಸದ ಪವಮಾನ ಹೋಮ, ದಂಪತಿಗೆ ದಾನ, ಅಪೂರ್ವ ದಾನ ನೀಡಲಾಗುವುದು ಹಾಗೂ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9900592154 ಸಂಪರ್ಕಿಸಬೇಕು ಎಂದು ಅಧಿಕ ಮಾಸ ಸೇವಾ ಸಮಿತಿ ಕನಕಾಚಲ ಆಚಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.