ಕಲಬುರ್ಗಿ: ನಗರದ ಜಿಲ್ಲಾ ನ್ಯಾಯಾಲಯ ಮುಂಭಾಗ ಹೊಂದಿಕೊಂಡಂತೆ ಹಾಗೂ ಕೇಂದ್ರ ಬಸ್ ನಿಲ್ದಾಣ ರಸ್ತೆ ಬದಿ ಅಲ್ಲಲ್ಲಿ ಅಕ್ರಮವಾಗಿ ಹಾಕಿದ್ದ 70ಕ್ಕೂ ಅಧಿಕ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.
ಹಲವು ತಿಂಗಳ ಬಳಿಕ ನಡೆದ ಅತಿ ದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ.
ಬೆಳಿಗ್ಗೆಯೇ ಪಾಲಿಕೆಯ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಜೆಸಿಬಿಗಳು ಒಂದೊಂದಾಗಿ ಗೂಡಂಗಡಿಯ ಮುಂಭಾಗದ ಶಟರ್‌ಗಳನ್ನು ಕಿತ್ತು ಹಾಕಿದವು.
ಜಿಲ್ಲಾ ನ್ಯಾಯಾಲಯದ ಮುಂಭಾಗ ಮತ್ತು ಡಿ.ಸಿ. ಕಚೇರಿ ಹಿಂಭಾಗದಿಂದ ಹಾದು ಹೋಗುವ ರಸ್ತೆ ಬದಿ ಹಾಕಿಕೊಂಡಿದ ಝೆರಾಕ್ಸ್, ದಸ್ತು ಬರಹಗಾರರ ಕಚೇರಿ, ಹೋಟೆಲ್‍ಗಳನ್ನು ತೆರವುಗೊಳಿಸಲಾಯಿತು. ಈ ಅಂಗಡಿಗಳನ್ನು ಇಟ್ಟುಕೊಳ್ಳಲು ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಪಾಲಿಕೆಯ ಎಂಜಿನಿಯರ್ ತಿಳಿಸಿದರು.
ಮಂಗಳವಾರ ಈ ರಸ್ತೆಯಲ್ಲೂ ಇರುವ ಕಬ್ಬಿನ ಹಾಲಿನ ಅಂಗಡಿ, ಎಳನೀರು ಅಂಗಡಿ, ಪೀಠೋಪಕರಣ ಅಂಗಡಿ, ಗೃಹ ಬಳಕೆ ವಸ್ತುಗಳ ಮಾರಾಟ ಮಾಡುವ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಈ ವೇಳೆಯಲ್ಲಿ ಕೆಲವು ಅಂಗಡಿದಾರರು ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.