ಕಮಲಾಪುರ: ತಾಲ್ಲೂಕಿನ ಮಹಾಗಾಂವ ಕ್ರಾಸ್ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿನ ಕೃಷಿ ಇಲಾಖೆಯ ಯಂತ್ರಧಾರೆ ಕೇಂದ್ರವನ್ನು ಶಾಸಕ ಬಸವರಾಜ ಮತ್ತಿಮಡು ಮಂಗಳವಾರ ಉದ್ಘಾಟಿಸಿದರು.
ಪ್ರಸಕ್ತ ಸಾಲಿನ ಮಂಗಾರು ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ರೈತರಿಗೆ ಅನುಕೂಲ ಮಾಡಿಕೊಡಲು ಮಹಾಗಾಂವ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಎರಡು ದೊಡ್ಡ ಟ್ರ್ಯಾಕ್ಟರ್, ಒಂದು ಚಿಕ್ಕ ಟ್ರ್ಯಾಕ್ಟರ್, ಬಿತ್ತನೆ ಯಂತ್ರ ಸೇರಿದಂತೆ ವಿವಿಧ ಉಪಕರಣ ಒದಗಿಸಲಾಗಿದೆ. ಇವು ಬಾಡಿಗೆಯಲ್ಲಿ ದೊರೆಯಲಿವೆ. ತೊಗರಿ, ಹೆಸರು, ಉದ್ದು, ಸೋಯಾಬಿನ್ ಬೀಜಗಳ ದಾಸ್ತಾನು ಮಾಡಲಾಗಿದ್ದು, ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬೇಕು’ ಎಂದರು.
ರೈತರಿಗೆ ಸಮರ್ಪಕವಾಗಿ ಗುಣಮಟ್ಟದ ಬೀಜ ಗೊಬ್ಬರ ಒದಗಿಸಬೇಕು. ಯಾವುದೇ ರೈತನಿಗೂ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗಬಾರದು. ಕೃಷಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ನಿಗಾ ಇಡಬೇಕು ಎಂದು ಸೂಚಿಸಿದರು.
ಗ್ರಾ.ಪಂ ಅಧ್ಯಕ್ಷೆ ಮನೀಷಾ ನಂದನಕುಮಾರ ಹರಸೂರಕರ, ತಹಶೀಲ್ದಾರ್ ಮೋಸಿನ ಅಹಮ್ಮದ, ತಾ.ಪಂ.ಇಒ ನೀಲಗಂಗಾ ಬಬಲಾದ, ಗಂಗಪ್ಪಗೌಡ ಪಾಟೀಲ, ಗಿರೀಶ ಪಾಟೀಲ, ಮಲ್ಲಿಕಾರ್ಜುನ ಮರತೂರ, ರಾಜಕುಮಾರ ಮಂಠಾಳೆ, ಗುಂಡಪ್ಪ ಶಿರಡೊಣ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.