ಕಲಬುರಗಿ: ‘ಅಂಚೆ ಕಚೇರಿಗಳು ಜನ ಸಾಮಾನ್ಯರಿಗೆ ಸಣ್ಣ ಉಳಿತಾಯದ ಮಹತ್ವವನ್ನು ತಿಳಿಸಿ ಅವರಲ್ಲಿ ಉಳಿತಾಯ ಮನೋಭಾವ ಹೆಚ್ಚಿಸಬೇಕು’ ಎಂದು ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಅಂಚೆ ವಿಭಾಗೀಯ ಶ್ರೇಷ್ಠತಾ ಪುರಸ್ಕಾರ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ, ಅಂಚೆ ಸಿಬ್ಬಂದಿಗೆ ಶ್ರೇಷ್ಠತಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
‘ಆಧುನಿಕ ಜಗತ್ತಿಗೆ ಹೊಂದಿಕೊಂಡು ಜನಸಮಾನ್ಯರ ಅನುಕೂಲವಾಗುವ ರೀತಿಯಲ್ಲಿ ಅಂಚೆ ಇಲಾಖೆಯು ಕಾರ್ಯನಿರ್ವಹಿಸಬೇಕಿದೆ. ಹೀಗಾಗಿ ಅಂಚೆ ಕಚೇರಿಗಳು ಎಲ್ಲಾ ಸೇವೆಗಳನ್ನು ಒದಗಿಸುವ ಏಕೀಕೃತ ಕೇಂದ್ರವಾಗಬೇಕಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕ ಆರ್.ಅಶೋಕ ಮಾತನಾಡಿದರು. ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಆರ್.ಕೆ. ಉಮರಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯ 52 ಅಂಚೆ ಸಿಬ್ಬಂದಿಗೆ ಶ್ರೇಷ್ಠತಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಐಪಿಪಿಬಿ ಸೀನಿಯರ್ ಮ್ಯಾನೇಜರ್ ಪ್ರಕಾಶ್ ನಾಯಕ್, ಸಹಾಯಕ ಅಂಚೆ ಅಧೀಕ್ಷಕ ಎಂ.ಎಲ್.ಭಾಗವಾನ್, ಅಂಚೆ ನಿರೀಕ್ಷಕರಾದ ಮಲ್ಲಿಕಾರ್ಜುನ ಕಲಶೆಟ್ಟಿ, ವಿಜಯಕುಮಾರ್, ಶಿವಾನಂದ ಬಡಗಿ, ಅಂಚೆ ಪಾಲಕರಾದ ಶಾಂತಕುಮಾರ ವಾಗಾ, ವಿದ್ಯಾಧರ ಗೋಟೂರ, ನಬಿಸಾಬ್, ಅಂಚೆ ಚೀಟಿ ಸಂಗ್ರಹಕಾರ ಸುಶಾಂತ ಭಟ್ ಭಾಗವಹಿಸಿದ್ದರು. ಶಹಾಬಾದ್ ಅಂಚೆ ನಿರೀಕ್ಷಕ ನವೀನ್ ಸಿಂಗ್ ಸ್ವಾಗತಿಸಿದರು. ಕಾಳಗಿ ಅಂಚೆ ನಿರೀಕ್ಷಕ ಸುರೇಶ ಅಂಚೆ ವಂದಿಸಿದರು. ಅಶ್ವಿನಿ ಹಾಗೂ ಚಂದ್ರಕಾಂತ ಸಾಲೋಟಗಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.