ADVERTISEMENT

‘ಒಳ ಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯ’

ಬಂಜಾರಾ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದ್ಯಾ ನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:41 IST
Last Updated 26 ಅಕ್ಟೋಬರ್ 2025, 7:41 IST
ಚಿಂಚೋಳಿಯಲ್ಲಿ ಶನಿವಾರ ನಡೆದ ಪ್ರದೇಶ ಬಂಜಾರಾ ಸೇವಾ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ಡಾ ಉಮೇಶ ಉಜಾಧವ, ಸಿದ್ದ್ಯಾ ನಾಯಕ ಹಾಗೂ ಇತರ ಗಣ್ಯರಿಗೆ ಬಂಜಾರಾ ಯುವತಿಯರು ಶನಿವಾರ ಮೇರಾ ಸಮರ್ಪಿಸಿದರು
ಚಿಂಚೋಳಿಯಲ್ಲಿ ಶನಿವಾರ ನಡೆದ ಪ್ರದೇಶ ಬಂಜಾರಾ ಸೇವಾ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ಡಾ ಉಮೇಶ ಉಜಾಧವ, ಸಿದ್ದ್ಯಾ ನಾಯಕ ಹಾಗೂ ಇತರ ಗಣ್ಯರಿಗೆ ಬಂಜಾರಾ ಯುವತಿಯರು ಶನಿವಾರ ಮೇರಾ ಸಮರ್ಪಿಸಿದರು   

ಚಿಂಚೋಳಿ: ‘ಒಳ ಮೀಸಲಾತಿಯಿಂದ ಬಂಜಾರಾ ಸಮಾಜಕ್ಕೆ ಅನ್ಯಾಯವಾಗಿದ್ದು ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಯಾರು ಹೆದರಬೇಕಿಲ್ಲ. ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡೋಣ’ ಎಂದು ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದ್ಯಾ ನಾಯಕ ತಿಳಿಸಿದರು.

ಅವರು ಇಲ್ಲಿನ ಬಂಜಾರಾ ಭವನದಲ್ಲಿ ಶನಿವಾರ ನಡೆದ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

‘ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘ ರಾಜ್ಯದ ಬಂಜಾರಾ ಜನರ ಶ್ರೇಯೋಭಿವೃದ್ಧಿಗಾಗಿ ಸುಮಾರು 6 ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು ಸಮಾಜದ ಕಟ್ಟಡ ಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವುದೇ ಸಂಘದ ಧ್ಯೇಯವಾಗಿದೆ. ಮಕ್ಕಳ ಮಾರಾಟದ ವರದಿ ಬಂದಾಗ ಸಂತ್ರಸ್ತರಿಗೆ ಉಚಿತವಾಗಿ ಹಸುಗಳು ನೀಡಿದ್ದೇವೆ’ ಎಂದರು.

ADVERTISEMENT

‘‍ಬೆಂಗಳೂರಿನಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ಬಂಜಾರಾ ಭವನ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ಸರ್ಕಾರ ಒಂದು ನಯ್ಯಾಪೈಸೆ ಅನುದಾನ ನೀಡಿಲ್ಲ’ ಎಂದು ಅವರು ಟೀಕಿಸಿದರು.

ಮಾಜಿ ಸಂಸದ, ಎಐಬಿಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಗೌರವ ಅಧ್ಯಕ್ಷ ಡಾ. ಉಮೇಶ ಜಾಧವ ಮಾತನಾಡಿ, ‘ಭಾಷೆ ಸಂಸ್ಕೃತಿ ಮತ್ತು ಉಡುಗೆ ತೊಡುಗೆ ಬಂಜಾರಾ ಜನಾಂಗದ ಹಿರಿಮೆಯಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜತೆಗೆ ನಾವೆಲ್ಲರೂ ಸೇವಾಲಾಲ ಮಹಾರಾಜರು ಹಾಕಿಕೊಟ್ಟ ದಾರಿಯಲ್ಲಿ ಸಾಗಲು ಸಂಕಲ್ಪ ಮಾಡಬೇಕು. ಸಮಾಜದ ಜನರಿಗೆ ಒಳಿತಾಗುವ ಕೆಲಸ ಮಾಡಿ. ಸಮಾಜದಲ್ಲಿ ರಾಜಕೀಯ ಮಾಡುವುದು ಮತ್ತು ಕಾಳೆಯುವುದು ಬಿಟ್ಟುಬಿಡಿ’ ಎಂದರು.

ಮಾಗಡಿಯ ಧನಂಜಯ ನಾಯಕ, ಕೊಪ್ಪಳದ ಯಮನೂರಪ್ಪ ಬಾಣೋತ್, ಬಿ.ಬಿ ನಾಯಕ್, ಲಕ್ಷ್ಮಣ ಚವ್ಹಾಣ, ರಮೇಶ ಕಾರಭಾರಿ, ರಾಜು ಸಾಹುಕಾರ, ಅಶೋಕ ಚವ್ಹಾಣ, ಗೋಪಾಲಸಿಂಗ್, ಗೋಪಾಲರಾವ್ ಕಟ್ಟಿಮನಿ, ಸಂತೋಷ ಗಡಂತಿ, ಶಿವಯೋಗಿ ರುಸ್ತಂಪುರ, ಸತೀಶರೆಡ್ಡಿ, ರತಿಬಾಯಿ ರಾಠೋಡ್, ರೇಣುಕಾ ಅಶೋಕ ಚವ್ಹಾಣ, ನಾಗವೇಣಿ ಅಣಕಲ್, ಭೀಮಶೆಟ್ಟಿ ಮುರುಡಾ, ಕೆ.ಎಂ.ಬಾರಿ, ಹೀರಾಸಿಂಗ್ ರಾಠೋಡ್ ಹಾಗೂ ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಪ್ರೇಮಸಿಂಗ್ ಜಾಧವ, ಪದಾಧಿಕಾರಿಗಳಾದ ರಾಜು ಪವಾರ, ತುಕಾರಾಮ ಪವಾರ ಮೋಟಿಮೋಕ ತಾಂಡಾ, ರಮೇಶ ರಾಠೋಡ್, ಗೋಪಾಲ ಜಾಧವ ಮೊದಲಾದವರು ಇದ್ದರು. ಅಶೋಕ ಚವ್ಹಾಣ ಸ್ವಾಗತಿಸಿದರು. ಗೋಪಾಲ ಜಾಧವ ನಿರೂಪಿಸಿದರು. ತುಕಾರಾಮ ಪವಾರ ವಂದಿಸಿದರು.

ಚಿಂಚೋಳಿಯ ಬಂಜಾರಾ ಭವನದಲ್ಲಿ ನಡೆದ ಪ್ರದೇಶ ಬಂಜಾರಾ ಸೇವಾ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಶನಿವಾರ ಸನ್ಮಾನಿಸಿ ನೇಮಕಾತಿ ಪತ್ರ ವಿತರಿಸಲಾಯಿತು

ಜಾಧವ ದ್ವಂದ್ವ ನಿಲುವು ಟೀಕೆ

ಚಿಂಚೋಳಿ: ‘ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ತಾಲ್ಲೂಕು ಪದಾಧಿಕಾರಿಗಳಲ್ಲಿ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡವರಿದ್ದಾರೆ. ಅಲ್ಲದೇ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತರಾತುರಿಯಲ್ಲಿ ನಡೆಸಲಾಗಿದೆ’ ಎಂದು ಸಮಾಜದ ಮುಖಂಡ ತುಕಾರಾಪ ಪವಾರ್ ಭೈರಂಪಳ್ಳಿ ಆರೋಪಿಸಿದರು. ‘ಸಮಾಜದ ಎಐಬಿಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಪ್ರದೇಶ ಬಂಜಾರಾ ಸೇವಾ ಸಂಘದ ಕರ್ನಾಟಕ ಘಟಕದ ಗೌರವಾಧ್ಯಕ್ಷ ಮಾಜಿ ಸಂಸದ ಡಾ. ಉಮೇಶ ಜಾಧವ ದ್ವಂದ್ವ ನಿಲುವು ಪ್ರಶ್ನಾರ್ಹವಾಗಿದೆ’ ಎಂದು ಟೀಕಿಸಿದರು. ‘ಸಂಘದಲ್ಲಿ ಎಲ್ಲಾ ಪಕ್ಷದವರಿದ್ದರೂ ಕೆಲವರಿಗೆ ಆಹ್ವಾನಿಸಿದ್ದು ಎಷ್ಟು ಸರಿ. ಸಮಾಜದಲ್ಲಿ ಸಂಘಟನೆ ಮಾಡುವವರು ಸ್ವಾರ್ಥಕ್ಕೆ ತಮ್ಮ ಬಾಲಂಗೋಚಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.