ADVERTISEMENT

ಕೆಲ್ಲೂರ ಗ್ರಾ.ಪಂ: ಸಿದ್ದಮ್ಮ ಅಧ್ಯಕ್ಷೆ, ಮಹಾಂತಪ್ಪ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:58 IST
Last Updated 3 ಜೂನ್ 2025, 14:58 IST
ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಗ್ರಾಮ ಪಂಚಾಯಿತಿಗೆ  ಜೆಡಿಎಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು
ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಗ್ರಾಮ ಪಂಚಾಯಿತಿಗೆ  ಜೆಡಿಎಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು   

ಜೇವರ್ಗಿ: ತಾಲ್ಲೂಕಿನ ಕೆಲ್ಲೂರ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸಿದ್ದಮ್ಮ ಸಿದ್ದಪ್ಪ ಪೂಜಾರಿ ಅಧ್ಯಕ್ಷೆ, ಮಹಾಂತಪ್ಪ ಮರೆಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆಲ್ಲೂರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 20 ಜನ ಸದಸ್ಯರಿದ್ದು, ಮಂಗಳವಾರ ನಡೆದ ಚುನಾವಣೆಯಲ್ಲಿ 14 ಜನ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಿದ್ದಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಮಲ್ಲಣ ಯಲಗೋಡ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಪಿಡಿಒ ಅರವಿಂದ ಚವ್ಹಾಣ ಇದ್ದರು.

ವಿಜಯೋತ್ಸವ:

ADVERTISEMENT

ಜೆಡಿಎಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಗ್ರಾ.ಪಂ ಎದುರು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಕಾರ್ಯಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಬೋಳ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಣೆ ಮಾಡಲಾಯಿತು.

ಜಿ.ಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಪ್ರಮುಖರಾದ ಪ್ರೇಮಣಗೌಡ ಪಾಟೀಲ, ಕಲ್ಲನಗೌಡ ಮಾಲಿ ಪಾಟೀಲ, ಬಸವರಾಜಗೌಡ ಪಾಟೀಲ, ಎಸ್.ಆರ್.ಪಾಟೀಲ, ಸಂಗಣಗೌಡ ಪಾಟೀಲ ಹಾಲಗಡ್ಲ, ಅಶೋಕ ಪಾಟೀಲ ಕನ್ಯಾಕೊಳೂರ್, ಸಾಹೇಬಗೌಡ ಹಾಲಗಡ್ಲಾ, ರಾಮಣಗೌಡ ಐನಾಪೂರ, ನರಸಪ್ಪಗೌಡ ಶಖಾಪೂರ, ಶಿವಶರಣಪ್ಪಗೌಡ ಶಖಾಪೂರ, ಮಲ್ಲಣ್ಣಗೌಡ ಪಾಟೀಲ, ಶಂಕ್ರಪ್ಪ ಸುಂಟ್ಯಾಣ, ಜಯಶ್ರೀ ಮಾಳಪ್ಪ ಪೂಜಾರಿ, ವೀಣಾ ಮುತ್ತಣ್ಣ ತುಂಬಡ, ಜಹೀರಾಬೀ ನಬಿಸಾಬ್, ಮಹಾಂತಪ್ಪ ಬಡಿಗೇರ, ಗುಂಡಪ್ಪ ಕವಲ್ದಾರ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.