ADVERTISEMENT

ಕಲಬುರಗಿ: ಸ್ವಕುಳಿ ಸಾಳಿ ಸಮಾಜದಿಂದ ಜಿಹ್ವೇಶ್ವರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:26 IST
Last Updated 12 ಆಗಸ್ಟ್ 2022, 5:26 IST
ಸ್ವಕುಳಿ ಸಮಾಜದಿಂದ ಆಯೋಜಿಸಿದ್ದ ಜಿಹ್ವೇಶ್ವರ ಜಯಂತಿಗೆ ಪಂ. ಜನಾರ್ದನ್ ಪಾಣಿಭಾತೆ ಚಾಲನೆ ನೀಡಿದರು. ರಾಜು ಜವಳಕರ್, ಅನಿಲ ಜವಳಕರ, ನಾರಾಯಣ ಸಿಂಗಾಡೆ ಇತರರು ಇದ್ದರು
ಸ್ವಕುಳಿ ಸಮಾಜದಿಂದ ಆಯೋಜಿಸಿದ್ದ ಜಿಹ್ವೇಶ್ವರ ಜಯಂತಿಗೆ ಪಂ. ಜನಾರ್ದನ್ ಪಾಣಿಭಾತೆ ಚಾಲನೆ ನೀಡಿದರು. ರಾಜು ಜವಳಕರ್, ಅನಿಲ ಜವಳಕರ, ನಾರಾಯಣ ಸಿಂಗಾಡೆ ಇತರರು ಇದ್ದರು   

ಕಲಬುರಗಿ: ಇಲ್ಲಿನ ಸ್ವಕುಳ ಸಾಳಿ ಸಮಾಜದಿಂದ ಜಿಹ್ವೇಶ್ವರರ ಜಯಂತ್ಯುತ್ಸವವನ್ನು ಹೋಳಿಕಟ್ಟಾದ ಜಿಹ್ವೇಶ್ವರ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಜಿಹ್ವೇಶ್ವರರ ಚರಿತ್ರೆಯನ್ನು ಪಂ. ಜನಾರ್ದನ್ ಪಾಣಿಭಾತೆ ಪ್ರಸ್ತುತಪಡಿಸಿದರು. ಒಂದು ತಿಂಗಳಿಂದ ಪ್ರಾತಃಕಾಲದಲ್ಲಿ ಹೋಮ–ಹವನ ಮತ್ತು ಐದು ದಿನಗಳಿಂದ ಭಾಗವತ ಪಾರಾಯಣದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜು ಜವಳಕರ್ ಮಾತನಾಡಿ, ಕ್ಷತ್ರಿಯ ಸಮಾಜದ 32 ಪಂಗಡಗಳು ಒಂದಾಗಿ ಸಮಾಜದ ಏಳಿಗೆಗೆ ಶ್ರಮಿಸುವ ಅಗತ್ಯವಿದೆ. ಇದರಿಂದ ಹಿಂದುಳಿದ ಸಮಾಜ ಎಂಬ ಹಣೆಪಟ್ಟಿಯನ್ನು ಅಳಿಸಬಹುದು ಎಂದರು.‌‌

ADVERTISEMENT

ಅನಿಲ ಜವಳಕರ, ಅಧ್ಯಕ್ಷತೆ ವಹಿಸಿದ್ದ ನಾರಾಯಣ ಸಿಂಗಾಡೆ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ಸಮಾಜದ ಮುಖಂಡರಾದ ಮುರಳಿಧರ ಹಿರೋಳ್ಳಿಕರ, ತುಕಾರಾಮ ಕೊಂಗೆ, ಶಾರದಾಬಾಯಿ ಚಿಲ್ಲಾಳ, ಕೃಷ್ಣಾತಾಯಿ ಸೂರೆ, ಡಾ. ಅವರ್ಣಾ ಏಕಬೋಟೆ, ವಿಜಯಕುಮಾರ ಸಾಖರೆ, ಉಪಾಧ್ಯಕ್ಷ ಅರುಣಕುಮಾರ ಚಿಲ್ಲಾಳ, ಮಹೇಶ ಸೂರೆ ಇದ್ದರು.‌

ಕಾರ್ಯಕ್ರಮವನ್ನು ಮುರಳಿಧರ ಟೊಣಪೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.