ADVERTISEMENT

ಪರ್ಸೆಂಟೇಜ್‌ ವಿಡಿಯೊ: ಆರ್‌ಡಿಪಿಆರ್‌ಜೆಇ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 0:39 IST
Last Updated 10 ಜುಲೈ 2025, 0:39 IST
<div class="paragraphs"><p>ಅಮಾನತು</p></div>

ಅಮಾನತು

   

ಕಲಬುರಗಿ: 15ನೇ ಹಣಕಾಸು ಯೋಜನೆಯ ಕಾಮಗಾರಿ ಕೈಗೊಳ್ಳಲು ಪಿಡಿಒ, ಎಇಇ, ಜೆಇಗಳಿಗೆ ಸಲ್ಲಬೇಕಾದ ಲಂಚದ ಪರ್ಸೆಂಟೇಜ್‌ ಕುರಿತ ವಿಡಿಯೊ ಜಾಲತಾಣದಲ್ಲಿ ಹಂಚಿಕೆಯಾದ ಹಿಂದೆಯೇ ಪಂಚಾಯತ್‌ರಾಜ್ ಎಂಜಿನಿಯರಿಂಗ್‌ನ ಚಿತ್ತಾಪುರ ಉಪ ವಿಭಾಗದ ಕಿರಿಯ ಎಂಜಿನಿಯರ್‌ನನ್ನು (ಜೆಇ) ಬುಧವಾರ ಅಮಾನತು ಮಾಡಲಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರ, ಚಿತ್ತಾಪುರದ ಕಿರಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀಪಾದ ಬಾಪುರಾವ ಕುಲಕರ್ಣಿ ಅಮಾನತುಗೊಂಡವರು.

ADVERTISEMENT

‘ಪಿಡಿಒಗೆ 5 ಪರ್ಸೆಂಟೇಜ್‌, ಎಇಇ 3 ಪರ್ಸೆಂಟೇಜ್‌, ನಮ್ಮದು 5 ಪರ್ಸೆಂಟೇಜ್‌ ಹಿಡಿದಿದ್ದೇನೆ’ ಎಂದು ಶ್ರೀಪಾದ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಅಮಾನತು ಆದೇಶ: ‘ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿದ್ದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.

ಪಿಡಿಒ ಅಮಾನತು: ಅಧ್ಯಕ್ಷರ ಸಹಿ ನಕಲು ಮಾಡಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಚಿತ್ತಾಪುರ ತಾಲ್ಲೂಕಿನ ತಾಲ್ಲೂಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.