ADVERTISEMENT

ಕಲಬುರಗಿ | ₹5.73 ಲಕ್ಷ ಮೌಲ್ಯದ ಆಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:46 IST
Last Updated 21 ಅಕ್ಟೋಬರ್ 2025, 4:46 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಕಲಬುರಗಿ: ಮಗನ ಮದುವೆ ಅಂಗವಾಗಿ ಬೀದರ್‌ ಜಿಲ್ಲೆಯ ಖೇಣಿರಂಜೋಳದಲ್ಲಿ ಲಕ್ಷ್ಮೀದೇವಿ ಉಡಿತುಂಬುವ ಕಾರ್ಯಕ್ರಮಕ್ಕಾಗಿ ಹೋಗಿದ್ದವರ ಮನೆಯ ಬೀಗ ಮುರಿದ ಕಳ್ಳರು ₹3.73 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದಾರೆ.

ನಗರದ ಕೆ.ಎಚ್‌.ಬಿ. ಗ್ರೀನ್‌ ಪಾರ್ಕ್‌ ಅಪಾರ್ಟ್‌ಮೆಂಟ್‌ ನಿವಾಸಿ, ಬಾಳೆಹಣ್ಣು ವ್ಯಾಪಾರಿ ರವಿ ಮಿರಕಲ್‌ ನಗದು, ಚಿನ್ನ–ಬೆಳ್ಳಿ ಆಭರಣ ಕಳೆದುಕೊಂಡವರು.

‘ಮಗನ ಮದುವೆ ಅಂಗವಾಗಿ ಬೀದರ್‌ ಜಿಲ್ಲೆಯ ಖೇಣಿರಂಜೋಳದ ಲಕ್ಷ್ಮೀದೇವಿ ಉಡಿತುಂಬುವ ಕಾರ್ಯಕ್ರಮಕ್ಕಾಗಿ ಮನೆಯವರೆಲ್ಲ ಹೋಗಿದ್ದೆವು. ಅ.18ರ ರಾತ್ರಿ 10ರಿಂದ ಅ.19ರ ನಸುಕಿನ 3 ಗಂಟೆ ಅವಧಿಯಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು, ₹3,47,600 ಮೌಲ್ಯದ 97 ಗ್ರಾಂ ಚಿನ್ನಾಭರಣ, ₹26,200 ಮೌಲ್ಯದ 190 ಗ್ರಾಂ ಬೆಳ್ಳಿ ಆಭರಣ ಹಾಗೂ ₹2 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ’ ಎಂದು ರವಿ ಮಿರಕಲ್‌ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.