ADVERTISEMENT

ಕಲಬುರಗಿ | ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಶಿಕ್ಷಕ ಬಂಧನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 13:41 IST
Last Updated 7 ಏಪ್ರಿಲ್ 2025, 13:41 IST
ಶಿವರಾಜ ಹಣಮಂತ
ಶಿವರಾಜ ಹಣಮಂತ   

ಕಲಬುರಗಿ: ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಅತಿಥಿ ಶಿಕ್ಷಕರೊಬ್ಬರನ್ನು ಮಾದನಹಿಪ್ಪರಗಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕ ಶಿವರಾಜ ಹಣಮಂತ (32) ಬಂಧಿತ ಶಿಕ್ಷಕ. 8ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ. ಶಿವರಾಜ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಾಯಿ ಯುಗಾದಿ ಹಬ್ಬಕ್ಕೆ ಮೂವರು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದರು. ಪರೀಕ್ಷೆಯ ಕಾರಣಕ್ಕೆ ಸಂತ್ರಸ್ತೆ ಬಾಲಕಿ ಮನೆಯಲ್ಲಿಯೇ ಉಳಿದಿದ್ದಳು. ಅದೇ ಗ್ರಾಮದಲ್ಲಿನ ಅಜ್ಜಿಯ ಮನೆಗೆ ಹೋಗಿದ್ದ ಬಾಲಕಿ, ಸಂಜೆ ವಾಪಸ್ ಬಂದು ಮನೆಯಲ್ಲಿ ಸ್ನೇಹಿತರ ಜತೆಗೆ ಟಿ.ವಿ. ನೋಡುತ್ತಿದ್ದಳು. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಶಿವರಾಜ, ಮನೆಗೆ ನುಗ್ಗಿದನು. ಇದರಿಂದ ಬಾಲಕಿಯ ಸ್ನೇಹಿತರು ಹೆದರಿ ಹೊರಗೆ ಓಡಿಹೋದರು ಎಂದು ಹೇಳಿದ್ದಾರೆ.

ADVERTISEMENT

ಬಾಲಕಿಯು ಮನೆಯಲ್ಲಿ ತಾಯಿ-ತಂದೆ ಇಲ್ಲ ಯಾಕೆ ಬಂದಿದ್ದು ಎಂದು ಶಿಕ್ಷಕನಿಗೆ ಕೇಳಿದಳು. ನಾನು ನಿನ್ನ ಪ್ರೀತಿಸುತ್ತೇನೆ ಎಂದು ಪುಸುಲಾಯಿಸಿ ಮತ್ತು ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದನು. ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯನ್ನು ಪೋಷಕರು ಕಲಬುರಗಿ ನಗರದ ಜಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಎಚ್ಚರವಾದಾಗ ನಡೆದ ಕೃತ್ಯವನ್ನು ಪೋಷಕರಿಗೆ ತಿಳಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.