ಕಲಬುರಗಿ: ಅಂಚೆ ಇಲಾಖೆಯ ಕರ್ನಾಟಕ ವೃತ್ತದಿಂದ ಆಯೋಜಿಸಿದ್ದ ದೀನ ದಯಾಳ್ ಸ್ಪರ್ಶ ಯೋಜನೆ ಶಿಷ್ಯವೇತನ ಪರೀಕ್ಷೆಯ ಪ್ರಾಜೆಕ್ಟಿನಲ್ಲಿ ನಗರದ ಸುಶಾಂತ್ ಪಿ. ಭಟ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಸುಶಾಂತ್ ನಗರದ ಎನ್‌ವಿ ಎಸಿಟಿ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ.
ಕಲಬುರಗಿ ಜಿಲ್ಲೆಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸುಶಾಂತ್ ಭಟ್ ಮಾತ್ರ ಜಿಲ್ಲೆಯಿಂದ ಉತ್ತೀರ್ಣರಾಗಿದ್ದಾನೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಚೆ ಚೀಟಿಗೆ ಸಂಬಂಧಿಸಿದಂತೆ ಒಂದು ಪ್ರಾಜೆಕ್ಟ್ ತಯಾರಿಸಬೇಕಾಗುತ್ತದೆ. ಅದನ್ನು ನಿಗದಿತ ಅವಧಿಯಲ್ಲಿ ಅಂಚೆ ಕಚೇರಿಗೆ ಸಲ್ಲಿಸಬೇಕು.
ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಪೈ ಹಾಗೂ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.