ADVERTISEMENT

ಕಲಬುರ್ಗಿ: ಹೊಳೆಯಂತಾದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 4:34 IST
Last Updated 15 ಅಕ್ಟೋಬರ್ 2020, 4:34 IST
ಕಲಬುರ್ಗಿಯಲ್ಲಿ ಮಂಗಳವಾರ ರಾತ್ರಿಯಿಡಿ ಸುರಿದ ಮಳೆಯಿಂದ ರಾಜರಾಜೇಶ್ವರಿ ನಗರ ಜಲಾವೃತಗೊಂಡಿದ್ದು ಬುಧವಾರ ಕಂಡುಬಂತು
ಕಲಬುರ್ಗಿಯಲ್ಲಿ ಮಂಗಳವಾರ ರಾತ್ರಿಯಿಡಿ ಸುರಿದ ಮಳೆಯಿಂದ ರಾಜರಾಜೇಶ್ವರಿ ನಗರ ಜಲಾವೃತಗೊಂಡಿದ್ದು ಬುಧವಾರ ಕಂಡುಬಂತು   

ಕಲಬುರ್ಗಿ:ಸುಮಾರು 10 ಗಂಟೆ ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಕಲಬುರ್ಗಿ, ಬೀದರ್‌ ಜಿಲ್ಲೆಗಳ ರಸ್ತೆಗಳೆಲ್ಲ ನದಿಯಂತೆ ತುಂಬಿ ಹರಿದವು. ತಗ್ಗುಪ್ರದೇಶದ ಬಹುಪಾಲು ಬಡಾವಣೆಗಳಲ್ಲಿ ಹಾಗೂ ಜಮೀನುಗಳಲ್ಲಿ ಕೆರೆಯಂತೆ ನೀರು ನಿಂತಿತ್ತು. ನಗರ ಪ್ರದೇಶಗಳಲ್ಲಿಯ ಉದ್ಯಾನಗಳು, ಕ್ರೀಡಾಂಗಣಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಅವು ಈಜುಕೊಳದಂತೆ ಕಾಣುತ್ತಿದ್ದವು.

‘ರಾತ್ರಿ ಮನೆಯಲ್ಲಿ ನೀರು ತುಂಬಿಕೊಳ್ಳಲಾರಂಭಿಸಿತು. ಮನೆ ಎದುರು ಹೊಳೆಯೇ ಹರಿಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು. ತಕ್ಷಣ ಮೊದಲ ಮಹಡಿಗೆ ತೆರಳಿದೆವು’ ಎಂದು ಕಲಬುರ್ಗಿ ರಾಜಾಜಿ ನಗರದ ಗುರುರಾಜ ಕುಲಕರ್ಣಿ ಹೇಳಿದರು.

ಮಹಾರಾಷ್ಟ್ರದಿಂದಲೂ ನೀರು: ಮಹಾರಾಷ್ಟ್ರದಲ್ಲಿಯೂ ಮಳೆಯಾಗುತ್ತಿದ್ದು, ಭೀಮಾ ನದಿಗೆ ನೀರು ಬಿಡಲಾಗುತ್ತಿದೆ.ಯಾದಗಿರಿ ಜಿಲ್ಲೆಯಲ್ಲಿ ನದಿ ತೀರದಲ್ಲಿರುವ 44 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ADVERTISEMENT

ಮಹಾರಾಷ್ಟ್ರದ ಲಾತೂರ ಜಲಾಶಯದಿಂದ ಹೆಚ್ಚುವರಿ ನೀರು ಬರುತ್ತಿರುವ ಕಾರಣ ಬೀದರ್‌ ಜಿಲ್ಲೆಯಲ್ಲಿ ಮಾಂಜ್ರಾ ನದಿ ಪಾತ್ರದಲ್ಲಿ ಪ್ರವಾಹ ಆತಂಕ ಎದುರಾಗಿದೆ.

ರಾಯಚೂರು ವರದಿ: ನಗರದ ತಗ್ಗು ಪ್ರದೇಶದಲ್ಲಿಯ ಮನೆಗಳಿಗೆ ನೀರು ನುಗ್ಗಿದ್ದರೆ, ಲಿಂಗಸುಗೂರು ತಾಲ್ಲೂಕುಯಲಗಟ್ಟಿ ಗ್ರಾಮದಲ್ಲಿ 30 ಮನೆಗಳು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.