ಕಲಬುರಗಿ: ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ‘ಓದುತ್ತಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ’ ಪ್ರವೇಶ ಆರಂಭ ಆಗಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಬಾಲಕಿಯರು, ಅಂಗವಿಕಲ ವಿದ್ಯಾರ್ಥಿನಿಯರು ಮತ್ತು ಅಂಗವಿಕಲ ಉದ್ಯೋಗಸ್ಥ ಮಹಿಳೆಯರು ಉಚಿತ ಪ್ರವೇಶ ಪಡೆಯಬಹುದಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿ.ಇಡಿ, ಐಟಿಐ, ನರ್ಸಿಂಗ್ ಸೇರಿ ಯಾವುದೇ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅವಕಾಶ ಇದೆ. ಪ್ರವೇಶಕ್ಕೆ 8 ಭಾವಚಿತ್ರ, ದಾಖಲಾಗಲು ಬೇಕಾಗಿರುವ ತರಗತಿಯ ಟಿ.ಸಿ ಮತ್ತು ಮಾರ್ಕ್ಸ್‌ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಂಗವಿಕಲರಾಗಿದ್ದರೆ ಯುಡಿಐಡಿ ಕಾರ್ಡ್ ಬೇಕಾಗಬಹುದು.
ಮಾಹಿತಿಗೆ ಶಹಾಬಜಾರ್, ಶೆಟ್ಟಿ ಟಾಕೀಸ್ ಎದುರುಗಡೆಯ ಗಂದಿಗುಡಿ ಲೇಔಟ್, ಅಕ್ಕ ಮಹಾದೇವಿ ಗುಡಿ ಹತ್ತಿರದ ಕಚೇರಿ ಸಂಪರ್ಕಿಬಹುದು. ಮಾಹಿತಿಗೆ 90083 06542, 78290 29435, 94483 47657 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.