ಕಮಲಾಪುರ: ತಾಲ್ಲೂಕಿನ ಭೀಮನಾಳ ಗ್ರಾಮದ ಸುತ್ತ ಶುಕ್ರವಾರ ಸುರಿದ ಭಾರಿ ಮಳೆ ಹಾಗಿ ಬಿರುಗಳಿಗೆ ಅಪಾರ ಹಾನಿ ಸಂಭವಿಸಿದೆ.
ಭೀಮನಾಳ ತಾಂಡಾದ ರೈತ ಜೈರಾಮ ಚೌಹಾಣ ಅವರ ಕೋಳಿ ಫಾರಂ ಕಿತ್ತು ಹೋಗಿದ್ದು ಸಾವಿರಾರು ಕೋಳಿಗಳು ಮೃತಪಟ್ಟಿವೆ. ಗೋಡೆಗಳು ಉರುಳಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶೆಡ್‌ನ ಪತ್ರಾಸ್‌ಗಳು ಸಂಪೂರ್ಣ ಕಿತ್ತು ಹೋಗಿವೆ. ಸುಮಾರು ₹8 ಲಕ್ಷ ಹಾನಿಯಾಗಿದೆ ಎಂದು ಎಂದು ಮುಖಂಡ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದ್ದಾರೆ ತಿಳಿಸಿದರು.
ಭೀಮನಾಳ ಗ್ರಾಮದ ಕುಪೇಂದ್ರ ನಿಗ್ಗುಡಗಿಯವರ ಪಪ್ಪಾಯಿ ಗಿಡಗಳು ಉರಳಿ ಅಪಾರ ನಷ್ಟವಾಗಿದೆ. ಇಂದ್ರಸೇನ ಬಿರಾದಾರ ಅವರ ಸೌತೆ ಬೆಳೆ ಹಾನಿಯಾಗಿದೆ. ಗ್ರಾಮದ ಸುತ್ತಲೂ ಗಿಡಮರಗಳು ಉರುಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.