ADVERTISEMENT

ಕನ್ನಡ ಸಮೃದ್ಧ ಭಾಷೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:47 IST
Last Updated 1 ನವೆಂಬರ್ 2022, 6:47 IST
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಕನ್ನಡ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ಚಾಲನೆ ನೀಡಿದರು
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಕನ್ನಡ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ಚಾಲನೆ ನೀಡಿದರು   

ಕಲಬುರಗಿ: ‘ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯಿದ್ದು, ಬೇರೆಲ್ಲ ಭಾಷೆಗಳಿಗಿಂತ ಶ್ರೇಷ್ಠ ಮತ್ತು ಸಮೃದ್ಧ ಭಾಷೆಯಾಗಿದೆ’ ಎಂದು ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಯುವ ಜನತೆಯಲ್ಲಿ ನಾಡಿನ ನೆಲ-ಜಲ, ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಲು ಪರಿಷತ್ತಿನ ಚಟುವಟಿಕೆಗಳು ಪೂರಕವಾಗಿವೆ’ ಎಂದರು.

ADVERTISEMENT

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಸಾಹಿತಿ ಎಸ್.ಪಿ.ಸುಳ್ಳದ್, ಸೋಮಶೇಖರ ಮಠ, ವಿದ್ಯಾಶ್ರೀ ಪಿಯು ಕಾಲೇಜಿನ ಪ್ರಾಚಾರ್ಯ ಕವಿರಾಜ ಪಾಟೀಲ, ಶರಣು ಪಪ್ಪಾ, ಸಚೀನ್ ಫರಹತಾಬಾದ್‌, ಶಿವರಾಜ ಅಂಡಗಿ, ಶರಣರಾಜರ್ ಛಪ್ಪರಬಂದಿ, ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಲತಾ ಬಿಲಗುಂದಿ, ರವಿಕುಮಾರ ಶಹಾಪುರಕರ್, ಸಂತೋಷ ಕುಡಳ್ಳಿ, ಸಿದ್ಧಾರಾಮ ಹಂಚನಾಳ, ವಿಜಯಕುಮಾರ ಪಟ್ಟೇದ, ವಿಠಲ ಬಡಿಗೇರ, ಎಸ್.ಎಂ.ಪಟ್ಟಣಕರ್, ಸುರೇಶ ದೇಶಪಾಂಡೆ, ಶರಣಬಸವ ಜಂಗಿನಮಠ, ಶರಣಬಸಪ್ಪ ನರೂಣಿ, ಗಣೇಶ ಚಿನ್ನಾಕಾರ ಇದ್ದರು.

ಸಂಜೆ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ನಾಟಕಕಾರ ಪ್ರಭುಲಿಂಗ ಕಿಣಗಿ ಸಾರಥ್ಯದ ಲೋಹಿಯಾ ಕಲಾತಂಡ ನಿರ್ಮಿಸಿದ ನಾಡು-ನುಡಿ ವಿಷಯಾಧಾರಿತ ‘ಅರಶಿಣ ಕುಂಕುಮ’ ನಾಟಕ ಪ್ರಯೋಗ ಜನಮನ ಸೂರೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.