ಕಲಬುರಗಿ: ನಗರದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಬಿರುಸಿನ ಮಳೆ ಸುರಿಯುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಇತ್ತು. ಕಳೆದೊಂದು ಗಂಟೆಯಿಂದ ಮಳೆ ಸುರಿಯುತ್ತಿದೆ. ಮಳೆಗೆ ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ.
ನಿತ್ಯದ ಕೆಲಸಗಳಿಗೆ ಹೊರಟ್ಟಿದ್ದ ಸಾರ್ವಜನಿಕರು ಪರದಾಡಿದರು. ಬಿರುಸಿನ ಮಳೆಯಿಂದ ರಕ್ಷಣೆ ಪಡೆಯಲು ಜನರು ಮರಗಳ, ಕ್ಲಾಂಪ್ಲೆಕ್ಸ್‌ಗಳಡಿ ನಿಂತು ರಕ್ಷಣೆ ಪಡೆದರು. ಕೆಲವರು ಕೊಡೆ, ರೇನ್ ಕೋಟ್‌ಗಳ ಮೊರೆ ಹೋದರು.
ನಗರದ ಅನ್ನಪೂರ್ಣ ಕ್ರಾಸ್, ಪಿಡಿಎ ಎಂಜಿನಿಯರ್ ಕಾಲೇಜು ರೈಲ್ವೆ ಕೆಳಸೇತುವೆ, ಹಳೇ ಜೇವರ್ಗಿ ಕ್ರಾಸ್ ರೈಲ್ವೆ ಕೆಳಸೇತುವೆ ಅಡಿ ನೀರು ನಿಂತು ಪಾದಚಾರಿಗಳು, ದ್ವಿಚಕ್ರ ವಾಹನಗಳ ಸವಾರರು ಪರದಾಡಿದರು.
ನಿರಂತರವಾಗಿ ಸುರಿದ ಮಳೆಯಿಂದ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಬಡಾವಣೆಗಳ ನಿವಾಸಿಗಳು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.