ADVERTISEMENT

ಕಲಬುರಗಿ: ಕಾಯಕ ಫೌಂಡೇಶನ್ ಶಾಲೆಗೆ 99.04 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:29 IST
Last Updated 3 ಮೇ 2025, 14:29 IST
ಅಮೃತಾ ಶೇ 99.04
ಅಮೃತಾ ಶೇ 99.04   

ಕಲಬುರಗಿ: ನಗರದ  ರಾಮ ಮಂದಿರ ವೃತ್ತದ ಕೋಟನೂರ (ಡಿ) ರಸ್ತೆಯಲ್ಲಿರುವ ಕಾಯಕ ಫೌಂಡೇಶನ್‌ನ ವಸತಿ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.04 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಆ್ಯಂಟನಿ ಸಾಮಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಅಮೃತಾ ಶೇ 99.04 ಅಂಕ ಪಡೆದಿದ್ದು, ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಐದು ವಿಷಯಗಳಲ್ಲಿ 100ಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.

ಶ್ವೇತಾ ಸಜ್ಜನ ಶೇ 97.44, ಅಪೂರ್ವ ಕುಲಕರ್ಣಿ ಶೇ 93.06, ಅಕ್ಷರಾ ಮದನ್ ಬಂಡೆ ಶೇ 93.04, ಸ್ಫೂರ್ತಿ ನಿಂಗಣ್ಣಗೌಡ ಶೇ 91.02,  ಅನಿರುದ್ಧ ಕಾಳಿಂಗ ಮೇಡಿ ಶೇ 91, ವರ್ಷಾ ಜಮಾದಾರ ಶೇ 90, ತನುಶ್ರೀ  ಯಾಳೆಗಾಂವ ಶೇ 90.04, ವರುಣ ಆವಂತಿ ಶೇ 90.04, ಪ್ರಸನ್ನರೇಣುಕಾ ಶೇ 90, ಪ್ರದೀಪ ಶೇ 88 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇದರಲ್ಲಿ ನಾಲ್ವರು ಕನ್ನಡದಲ್ಲಿ ನೂರಕ್ಕೆ ನೂರು ಅಂಕ  ಪಡೆದುಕೊಂಡಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಶಿವರಾಜ ಟಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಸಪ್ನಾ ರೆಡ್ಡಿ ಪಾಟೀಲ, ಉಪ ಸಂಸ್ಥಾಪಕ ಚಂದ್ರಶೇಖರ ಟಿ.ಪಾಟೀಲ, ಪುಷ್ಪಾ ಚಂದ್ರಶೇಖರ ಪಾಟೀಲ ಹಾಗೂ ಪ್ರಾಚಾರ್ಯ ಆ್ಯಂಟನಿ ಸಾಮಿ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ವೇತಾ ಸಜ್ಜನ ಶೇ 97.44

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.