ADVERTISEMENT

ಸೆ.17ರಂದು ಪಟ್ನಾ ಚಲೋ: ಕೆಂಪಣ್ಣ ಸಾಗ್ಯಾ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:43 IST
Last Updated 8 ಸೆಪ್ಟೆಂಬರ್ 2024, 15:43 IST
ಕೆಂಪಣ್ಣ ಸಾಗ್ಯಾ
ಕೆಂಪಣ್ಣ ಸಾಗ್ಯಾ   

ಕಲಬುರಗಿ: ಬೌದ್ಧರ ಪವಿತ್ರ ತಾಣ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಮಂಡಳಿಯ (ಬಿಟಿಎಂಸಿ) ಪುನರ್‌ ರಚನೆ ಹಾಗೂ ಬೋಧ ಗಯಾ ಮಂದಿರ ಕಾಯ್ದೆ–1949 ರದ್ದುಪಡಿಸುವಂತೆ ಒತ್ತಾಯಿಸಿ ಸೆ.17ರಂದು ಪಟ್ನಾ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆಂಪಣ್ಣ ಸಾಗ್ಯಾ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬಿಟಿಎಂಸಿಯಲ್ಲಿ ಒಟ್ಟು 9 ಸದಸ್ಯರಿದ್ದು, ಅದರಲ್ಲಿ ನಾಲ್ವರು ಬೌದ್ಧರು, ನಾಲ್ವರು ಹಿಂದೂಗಳು ಹಾಗೂ ಒಬ್ಬರು ಜಿಲ್ಲಾಧಿಕಾರಿ. ಸಮಿತಿಯಲ್ಲಿರುವ ಹಿಂದೂ ಸದಸ್ಯರ ಬದಲಿಗೆ ಬೌದ್ಧರಿಗೇ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಕುಮಾರ ರಾಮನಗರ ಮಾತನಾಡಿ, ‘ಈ ಬೇಡಿಕೆಗಳ ಈಡೇರಿಕೆಗಾಗಿ ಸೆ.17ರಂದು ಐದು ಲಕ್ಷ ಬೌದ್ಧರಿಂದ ಶಾಂತಿಯುತ ರ‍್ಯಾಲಿ ಹಾಗೂ ಬಹಿರಂಗ ಸಭೆ ನಡೆಯಲಿದೆ. ಅದರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಸಾವಿರಾರು ಬೌದ್ಧ ಉಪಾಸಕರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಶ್ಯಾಮ ಘಾಟಿಗೆ, ವಿಭಾಗೀಯ ಸಂಚಾಲಕ ಚಂದ್ರು ಬಿ.ಚಕ್ರವರ್ತಿ, ರಮಾನಂದ ಮಂಡ್ಯ, ಬಸವರಾಜ ಜಮಖಂಡಿ, ಆನಂದ ಬೆಳ್ಳಾರೆ ಮಂಗಳೂರು, ಬಸವರಾಜ ಬಾಡಿಯಾಳ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.