ADVERTISEMENT

ಕೆನ್‌ಬ್ರಿಡ್ಜ್‌ ಶಾಲೆಯ ಮಕ್ಕಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 16:12 IST
Last Updated 29 ನವೆಂಬರ್ 2019, 16:12 IST
ಪ್ರಶಸ್ತಿ ವಿಜೇತ ವಿದ್ಯಾರ್ಥಿನಿಯರಿಗೆ ಕಲಬುರ್ಗಿಯ ಕೆನ್‌ಬ್ರಿಡ್ಜ್‌ ಸ್ಕೂಲ್‌ ನಿರ್ದೇಶಕ ನೋಶ್ಜಾದ್‌ ನೆವಿಲ್ಲೆ ಇರಾನಿ, ಪ್ರಾಂಶುಪಾಲರಾದ ನೀತಾ ಪುರೋಹಿತ ಅಭಿನಂದನೆ ಸಲ್ಲಿಸಿದರು
ಪ್ರಶಸ್ತಿ ವಿಜೇತ ವಿದ್ಯಾರ್ಥಿನಿಯರಿಗೆ ಕಲಬುರ್ಗಿಯ ಕೆನ್‌ಬ್ರಿಡ್ಜ್‌ ಸ್ಕೂಲ್‌ ನಿರ್ದೇಶಕ ನೋಶ್ಜಾದ್‌ ನೆವಿಲ್ಲೆ ಇರಾನಿ, ಪ್ರಾಂಶುಪಾಲರಾದ ನೀತಾ ಪುರೋಹಿತ ಅಭಿನಂದನೆ ಸಲ್ಲಿಸಿದರು   

ಕಲಬುರ್ಗಿ: ಬೆಂಗಳೂರಿನ ಸಿಂಧಿ ಸಿಬಿಎಸ್‌ಇ ಹೈಸ್ಕೂಲ್‌ ವತಿಯಿಂದ ಆಯೋಜಿಸಿದ್ದ ಪ್ರಾದೇಶಿಕ ವಿಜ್ಞಾನ ಹಬ್ಬ–2019–20ರಲ್ಲಿ ಪ್ರಥಮ ಬಹುಮಾನ ಹಾಗೂ ತೃತೀಯ ಬಹುಮಾನವನ್ನು ನಗರದ ಕೆನ್‌ಬ್ರಿಡ್ಜ್‌ ಶಾಲೆಯ ವಿದ್ಯಾರ್ಥಿಗಳು ಪಡೆದರು.

ಕುಡಿಯುವ ನೀರಿಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯವನ್ನು ಆರಿಸಿಕೊಳ್ಳಲಾಗಿತ್ತು. 9ನೇ ತರಗತಿಯ ಸಾಕ್ಷಿ ಕೆ ಮತ್ತು ಸಿ. ಶ್ರೇಯಾ ಅವರು ಶೈಕ್ಷಣಿಕ ಆಟಗಳು ಹಾಗೂ ಗಣಿತ ಪ್ರಾತ್ಯಕ್ಷಿಕೆಯ ಪ್ರಾಜೆಕ್ಟ್‌ಗಾಗಿ ಪ್ರಥಮ ಬಹುಮಾನ ಪಡೆದರು. ಅದೇ ತರಗತಿಯ ರುಚಿ ತೋಶ್ನಿವಾಲ್‌ ಹಾಗೂ ಸಾನಿಯಾ ತಬಸ್ಸುಮ್ ಅವರು ಸಮಗ್ರ ಕೃಷಿ ಪದ್ಧತಿಗಳು ಕುರಿತ ಪ್ರಾತ್ಯಕ್ಷಿಕೆಗೆ ತೃತೀಯ ಬಹುಮಾನ ದೊರೆತಿದೆ.

ಕೆನ್‌ಬ್ರಿಡ್ಜ್‌ ಸ್ಕೂಲ್‌ ನಿರ್ದೇಶಕ ನೋಶ್ಜಾದ್‌ ನೆವಿಲ್ಲೆ ಇರಾನಿ, ಪ್ರಾಂಶುಪಾಲರಾದ ನೀತಾ ಪುರೋಹಿತ, ಉಪ ಪ್ರಾಂಶುಪಾಲರಾದ ಸುಲೋಚನಾ ರೆಡ್ಡಿ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.