ADVERTISEMENT

ಕೋರವಾರ: ಪಿಂಚಣಿ, ಪೌತಿ ಅದಾಲತ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:16 IST
Last Updated 6 ಸೆಪ್ಟೆಂಬರ್ 2024, 13:16 IST
ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶುಕ್ರವಾರ ತಹಶೀಲ್ದಾರ್ ಘಮಾವತಿ ರಾಠೋಡ ಅಧ್ಯಕ್ಷತೆಯಲ್ಲಿ ಪಿಂಚಣಿ ಮತ್ತು ಪೌತಿ ಅದಾಲತ್ ಜರುಗಿತು
ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶುಕ್ರವಾರ ತಹಶೀಲ್ದಾರ್ ಘಮಾವತಿ ರಾಠೋಡ ಅಧ್ಯಕ್ಷತೆಯಲ್ಲಿ ಪಿಂಚಣಿ ಮತ್ತು ಪೌತಿ ಅದಾಲತ್ ಜರುಗಿತು   

ಕಾಳಗಿ: ತಾಲ್ಲೂಕಿನ ಕೋರವಾರ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಪಿಂಚಣಿ ಮತ್ತು ಪೌತಿ ಅದಾಲತ್ ನಡೆಯಿತು.

ತಹಶೀಲ್ದಾರ್ ಘಮಾವತಿ ರಾಠೋಡ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ಜನರಿಂದ ಎಸ್.ಎಸ್.ವೈ ಪಿಂಚಣಿ ಯೋಜನೆಯ 3, ವೃದ್ಧಾಪ್ಯ ವೇತನದ 4 ಅರ್ಜಿಗಳು ಮತ್ತು ಪಹಣಿ ತಿದ್ದುಪಡಿಯ 6, ಪೌತಿ ವಿರಾಸತ್‌ನ 6 ಅರ್ಜಿಗಳು ಸಲ್ಲಿಕೆಯಾದವು.

ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಕ್ಷೇಮಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಕಮ್ಮ ಮೇಲಕೇರಿ, ಪಿಡಿಒ ಶರ್ಪೊದ್ದಿನ್ ವೇದಿಕೆಯಲ್ಲಿದ್ದರು.

ADVERTISEMENT

ಕೋಡ್ಲಿ ಹೋಬಳಿಯ ರಟಕಲ್ ಗ್ರಾಮದಲ್ಲಿ ಜರುಗಿದ ಅದಾಲತ್‌ನಲ್ಲಿ ಒಟ್ಟು 20 ಅರ್ಜಿ ಸ್ವೀಕೃತವಾಗಿವೆ. ಪಿಂಚಣಿ ಅರ್ಜಿ 2, ಸ್ಥಗಿತಗೊಂಡ ಪಿಂಚಣಿ ಅರ್ಜಿ 11, ಪೌತಿ ಅರ್ಜಿ 1 ಮತ್ತು ಇತರೆ ಅರ್ಜಿ 6 ಸಲ್ಲಿಕೆ. ಈ ಪೈಕಿ 2 ಪಿಂಚಣಿ ಅರ್ಜಿ ವಿಲೇವಾರಿ ಮಾಡಲಾಗಿದೆ.

ಪಸ್ತಾಪುರ ಗ್ರಾಮದಲ್ಲಿ ಗುರುವಾರ ಜರುಗಿದ ಅದಾಲತ್‌ದಲ್ಲಿ 3 ಅರ್ಜಿ ಸ್ವೀಕೃತಗೊಂಡಿದ್ದು, ಇವೆ ಸ್ಥಗಿತಗೊಂಡ ಪಿಂಚಣಿಯ ಅರ್ಜಿಗಳಾಗಿವೆ. ಈ ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ ಎಂದು ಕೋಡ್ಲಿ ಹೋಬಳಿ ಕಂದಾಯ ನಿರೀಕ್ಷಕ ಬಸವಣಪ್ಪ ಹೂಗಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.