ADVERTISEMENT

ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:09 IST
Last Updated 22 ಸೆಪ್ಟೆಂಬರ್ 2020, 15:09 IST
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಿ, ಅಭಿನಂದಿಸಲಾಯಿತು
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಿ, ಅಭಿನಂದಿಸಲಾಯಿತು   

ಕಲಬುರ್ಗಿ: ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನಗರದಲ್ಲಿ ಈಚೆಗೆ ಆಯ್ಕೆ ಮಾಡಲಾಯಿತು. ಈ ಸಂಘವು ಜಿಲ್ಲೆಯಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕಿಯರನ್ನು ಒಳಗೊಂಡಿದೆ.

ನಗರದಲ್ಲಿ ಈಚೆಗೆ ನಡೆದ ಜಿಲ್ಲೆಯ ಶಿಕ್ಷಕಿಯರ ಸಭೆಯಲ್ಲಿ, ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಡಾ.ಲತಾ ಎಸ್. ಮುಳ್ಳೂರ್ ಅವರ ಅನುಮೋದನೆಯಂತೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಶಿಕ್ಷಕಿಯರ ಅನೇಕ ಸಮಸ್ಯೆಗಳು ಮತ್ತು ಕೆಲಸದ ಸಂದರ್ಭದಲ್ಲಿ ಒದಗಿ ಬರುವ ಕಷ್ಟಕರ ವಿಚಾರದಲ್ಲಿ ನೆರವಿಗೆ ನಿಲ್ಲುವ ಉದ್ದೇಶದಿಂದ ಈ ಸಂಘದ ಅಸ್ತಿತ್ವಕ್ಕೆ ಬಂದಿದೆ.

ಮಹಿಳಾ ಜಾಗೃತಿ, ನಿರಂತರ ಸಮಾವೇಶ, ಸಬಲೀಕರಣ, ಗುಣಮಟ್ಟದ ಶಿಕ್ಷಣದ ಚಿಂತನೆ, ಸೇವೆಗೈದವರಿಗೆ ಪುರಸ್ಕಾರ, ಅಗತ್ಯವಿದ್ದವರಿಗೆ ತರಬೇತಿ ಕಾರ್ಯಾಗಾರ ಆಯೋಜಿಸುವುದು ಸೇರಿದಂತೆ ಹಲವು ಉದ್ದೇಶಗಳನ್ನು ಈ ಸಂಘ ಹೊಂದಿದೆ. 12 ತಾಲ್ಲೂಕುಗಳಲ್ಲಿಯೂ ಮಹಿಳಾ ಶಿಕ್ಷಕಿಯರ ಸಂಘ ತಾಲ್ಲೂಕು ಘಟಕಗಳನ್ನು ರಚನೆ ಮಾಡಲು ಜಿಲ್ಲಾ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಜಿಲ್ಲಾ ಘಟಕದ ಪದಾಧಿಕಾರಿಗಳು: ಸೇವಂತಾ ಚೌವ್ಹಾಣ (ಅಧ್ಯಕ್ಷೆ), ಸಾವಿತ್ರಿ ಪಾಟೀಲ (ಪ್ರಧಾನ ಕಾರ್ಯದರ್ಶಿ), ಮಲ್ಲಮ್ಮ ಮತ್ತಿಮೂಡ (ಕೋಶಾಧ್ಯಕ್ಷೆ), ಗುರುಬಾಯಿ ಹೇರಿ, ವಿಶಾಲಾಕ್ಷಿ ಎಸ್, ಸಾವಿತ್ರಿ ಚಾಂದಕವಟೆ, ಶೋಭಾ ಪತ್ತಾರ, ಸುಧಾ ಬಿರಾದಾರ (ಉಪಾಧ್ಯಕ್ಷರು), ಬೇಬಿ ಫಾತಿಮಾ, ಇಂದಿರಾ ಪೂರ್ಣಸಿಂಗ್, ಜ್ಯೋತಿ ಅಗ್ನಿಹೋತ್ರಿ, ಅನುಪೂರ್ಣ ಸೋಮಾ, ಸುರೇಖಾ ಚಂದುರೆ, ಮೀನಾಕ್ಷಿ, ಜಯಶ್ರೀ ನಾಗಶೆಟ್ಟಿ, ರೇಣುಕಾ (ಸಹ ಕಾರ್ಯದರ್ಶಿಗಳು), ಸುಜಾತಾ, ಉಮಾ ಮಠಪತಿ, ವಿದ್ಯಾವತಿ ಚೌವ್ಹಾಣ, ಚಂದ್ರಕಲಾ ಪವಾರ್, ಜಗದೇವಿ ಲಿಂಗಯ್ಯ, ಸವಿತಾ ಅವಟೆ, ವಿಶಾಲಾಕ್ಷಿ, ಜಗದಮಹೇಶ್ವರಿ ಗೂಳಗೆ, ರಶ್ಮಿ ಗೂಡಬೋಲೆ (ಸಂಘಟನಾ ಕಾರ್ಯದರ್ಶಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.