ADVERTISEMENT

ಚುನಾವಣೆಗೂ ಮುನ್ನವೇ ಮದ್ಯದ ಸದ್ದು!

ವಾರದಲ್ಲಿ ₹3.90 ಲಕ್ಷ ಮೌಲ್ಯದ ಮದ್ಯ–ವಾಹನ ವಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:09 IST
Last Updated 19 ಮಾರ್ಚ್ 2019, 12:09 IST

ಕಲಬುರ್ಗಿ: ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಆದರೂ, ಜಿಲ್ಲೆಯಲ್ಲಿ ಈಗಲೇ ‘ಮದ್ಯದ ಸದ್ದು’ ಶುರುವಾಗಿದೆ.

ಜಿಲ್ಲಾ ಆಡಳಿತವು ಒಂದು ವಾರದಲ್ಲಿ ₹3.90 ಲಕ್ಷ ಮೌಲ್ಯದ 919 ಲೀಟರ್‌ ಮದ್ಯ ಹಾಗೂ ಮದ್ಯವನ್ನು ಸಾಗಿಸಲು ಬಳಸುತ್ತಿದ್ದ 15 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದೆ.

ಅಬಕಾರಿ ಇಲಾಖೆಯವರು ₹3.66 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದರೆ, ಪೊಲೀಸ್‌ ಇಲಾಖೆ ₹2.28 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ.

ADVERTISEMENT

‘ಸುಗಮ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲೆಯಲ್ಲಿ 11 ಜನ ವೆಚ್ಚ ವೀಕ್ಷಕರು, 63 ಸಂಚಾರಿ ದಳ, 81 ವಿಚಕ್ಷಕ ದಳಗಳನ್ನು ನಿಯೋಜಿಸಲಾಗಿದೆ. ಅಕ್ರಮ ಮದ್ಯದ ಮೇಲೆ ನಿಗಾ ಇಡಲು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ 11 ತಂಡಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಜಿಲ್ಲೆಯ ಮಾದರಿ ನೀತಿ ಸಂಹಿತೆಯ ನೋಡಲ್‌ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.