ಕಲಬುರಗಿ ನಗರದಲ್ಲಿ ಶನಿವಾರ ಸುರಿದ ಮಳೆಯಲ್ಲಿ ಜನ ಸಾಗಿದರು.
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ನಗರದಲ್ಲಿ ಶನಿವಾರ ಸಂಜೆ 4 ಗಂಟೆಗೆ ಆರಂಭವಾದ ಮಳೆ ಸುಮಾರ ಅರ್ಧಗಂಟೆಗೂ ಅಧಿಕ ಕಾಲ ಉತ್ತಮವಾಗಿ ಸುರಿಯಿತು. ಬಳಿಕ ಮಧ್ಯರಾತ್ರಿವರೆಗೂ ಜಿಟಿಜಿಟಿ ಹನಿಯುತ್ತಲೇ ಇತ್ತು. ರಸ್ತೆಗಳು ತುಂಬಿ ಹರಿದಿವೆ. ಒಳಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದೆ.
ಕಳೆದ 15 ದಿನಗಳಿಂದ ಮಳೆ ನಿರಂತರವಾಗಿರುವುದರಿಂದ ಜಿಲ್ಲೆಯಲ್ಲಿ ರೈತರು ಹೊಲಗಳಿಗೆ ಕಾಲಿಡಲು ಆಗುತ್ತಿಲ್ಲ. ಹೂಬಿಟ್ಟಿರುವ ಸೂರ್ಯಕಾಂತಿಯ ಪರಾಗ ಸ್ಪರ್ಶವಾಗದೇ ಪುಡಿ ಉದುರುತ್ತಿದೆ. ತೊಗರಿ ಹೊಲಗಳಲ್ಲಿ ಮೊಣಕಾಲುವರೆಗೆ ಕಳೆ ಬೆಳೆದು ನಿಂತಿದೆ. ಹಿಂಗಾರಿಯ ಬಿಳಿಜೋಳ, ಕಡಲೆ, ಕುಸುಬೆಗೆಂದು ಖಾಲಿ ಬಿಟ್ಟಿದ್ದ ಮುಡಿ ಹೊಲಗಳಲ್ಲಿ ಕಸ ತುಂಬಿವೆ. ಮಾಘ ಮಳೆಯೂ ಆರಂಭದ ಮೊದಲ ದಿನವೇ ಸುರಿದಿದ್ದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಮಳೆ ಬಿಡುವು ನೀಡಿದರೆ ನಿಟ್ಟುಸಿರು ಬಿಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.