ADVERTISEMENT

ದೇವಲಗಾಣಗಾಪುರ: ಹಾಸಿಗೆ ತೊಳೆಯಲು ಹೋಗಿದ್ದವ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 16:03 IST
Last Updated 2 ಆಗಸ್ಟ್ 2024, 16:03 IST
ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಹತ್ತಿರದ ಭೀಮಾ ನದಿಗೆ ಬಿದ್ದ ಶಶಿಕುಮಾರ ಡಾಂಗೆ ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿರುವುದು
ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಹತ್ತಿರದ ಭೀಮಾ ನದಿಗೆ ಬಿದ್ದ ಶಶಿಕುಮಾರ ಡಾಂಗೆ ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿರುವುದು   

ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲಗಾಣಗಾಪುರ ಸಮೀಪದ ಭೀಮಾ ನದಿಯ ಪಾಪನಾಶಿನಿಯಲ್ಲಿ ಹಾಸಿಗೆ ತೊಳೆಯಲು ಹೋಗಿದ್ದ ಶಶಿಕುಮಾರ ಡಾಂಗೆ ಎಂಬಾತ ನೀರು ಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಲಗಾಣಗಾಪುರದ ನಿವಾಸಿಗಳಾದ ಶಶಿಕುಮಾರ ಹಾಗೂ ಶರಣು ಅರ್ಜುನಗಿ ಇಬ್ಬರೂ ಸೇರಿ ನದಿಯಲ್ಲಿ ಹಾಸಿಗೆ–ಹೊದಿಕೆಗಳನ್ನು ತೊಳೆಯುತ್ತಿದ್ದರು. ಈ ವೇಳೆ ಶಶಿಕುಮಾರ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಶರಣು ಕೂಡ ನದಿಗೆ ದುಮುಕಿದ್ದಾರೆ. ಈ ವೇಳೆ ಅಲ್ಲಿಗೆ ಧಾವಿಸಿದ್ದ ಅಗ್ನಿಶಾಮಕ ದಳದವರು, ಶರಣು ಅವರನ್ನು ರಕ್ಷಿಸಿದ್ದಾರೆ. 

ಶಶಿಕುಮಾರ ಡಾಂಗೆ ದೇಹ ಇನ್ನೂ ಪತ್ತೆಯಾಗಿಲ್ಲ. ಪತ್ತೆ ಕಾರ್ಯಚರಣೆ ಮುಂದುವರಿದಿದೆ ಎಂದು ದೇವಲ ಗಾಣಗಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT
ಶಶಿಕುಮಾರ ಡಾಂಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.