ADVERTISEMENT

ಮಾಣಿಕಪುರ ಜಲಪಾತ ನೋಡಬನ್ನಿ...

ಜಗನ್ನಾಥ ಡಿ.ಶೇರಿಕಾರ
Published 24 ಆಗಸ್ಟ್ 2020, 20:00 IST
Last Updated 24 ಆಗಸ್ಟ್ 2020, 20:00 IST
ಚಿಂಚೋಳಿ ತಾಲ್ಲೂಕು ಕುಸ್ರಂಪಳ್ಳಿ ಬಳಿಯ ಮಾಣಿಕಪುರ ಜಲಪಾತ
ಚಿಂಚೋಳಿ ತಾಲ್ಲೂಕು ಕುಸ್ರಂಪಳ್ಳಿ ಬಳಿಯ ಮಾಣಿಕಪುರ ಜಲಪಾತ   

ಚಿಂಚೋಳಿ: ವನ್ಯಜೀವಿ ಧಾಮದಲ್ಲಿರುವ ಜನವಸತಿ ರಹಿತ ಗ್ರಾಮವಾದ ಮಾಣಿಕಪುರದ ಎದುರಿಗೆ ಹರಿಯುವ ರಾಚೇನಹಳ್ಳ ನಾಲಾ ಜಲಪಾತಗಳಿಗೆ ಪ್ರಸಿದ್ಧಿ ಪಡೆದಿದೆ.

ಒಂದೇ ನದಿ (ರಾಚೇನಹಳ್ಳ ನಾಲಾ)ಗೆ ಇಲ್ಲಿ ಮೂರ‍್ನಾಲ್ಕು ಜಲಪಾತಗಳು ಕಾಣಸಿಗುತ್ತವೆ. ಎತ್ತರದ ಮುಖ್ಯ ಜಲಪಾತದಲ್ಲಿ ಜೋಡಿಯಾಗಿ ಧುಮ್ಮಿಕ್ಕುವ ಜಲಧಾರೆ ಮುಂದೆ ಒಂದೆ ಸಂದಿನಿಂದ ಕಲ್ಲು ಬಂಡೆಯ ಮೇಲೆ ಹರಡಿದಾಗ ಕಾಣುವ ನೀರಿನ ವೈಭವ ದೃಶ್ಯಕಾವ್ಯವನ್ನು ಮೀರಿಸುತ್ತದೆ. ಅಲ್ಲಿಂದ ಜುಳುಜುಳು ನಾಲೆಯಲ್ಲಿ ಹರಿದು ಮತ್ತೆ ಎತ್ತರದಿಂದ ಕೆಳಕ್ಕೆ ಬೀಳುವ ಸುಂದರ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಕಾಡಿನಲ್ಲಿ ಚಾರಣದ ಮಜಾದ ಜತೆಗೆ ಜಲಧಾರೆಯ ವೈಭವವನ್ನು ಒಂದೇ ಕಡೆ ಕಣ್ತುಂಬಿಸಿಕೊಳ್ಳಲು ಇದು ಹೇಳಿಮಾಡಿಸಿದಂತಿದೆ. ಮಾಣಿಕಪುರ ಜಲಪಾತದ ವಿಶೇಷ ಎಂದರೆ ಇದರ ಕೆಳ ಭಾಗಕ್ಕೆ ಅತ್ಯಂತ ಸುಲಭವಾಗಿ ಇಳಿಯಬಹುದಾಗಿದೆ.

ADVERTISEMENT

ಚಿಂಚೋಳಿಯಿಂದ ಕೊಳ್ಳೂರು ಕ್ರಾಸ್‌ಗೆ 10 ಕಿ.ಮೀ, ಅಲ್ಲಿಂದ ಕುಸ್ರಂಪಳ್ಳಿ 3 ಕಿ.ಮೀ ಕ್ರಮಿಸಿ ಗ್ರಾಮದಿಂದ 300ರಿಂದ 400 ಮೀಟರ್ ಉತ್ತರ ದಿಕ್ಕಿಗೆ ಮುಂದೆ ಸಾಗಿದರೆ ಬಲ ಭಾಗದ ಕಚ್ಚಾ ರಸ್ತೆಯಲ್ಲಿ ನೆಲದಲ್ಲಿ ಗುಮ್ಮಿ ಹಾಕಿರುವುದು ಕಾಣಸಿಗುತ್ತದೆ. ಗುಮ್ಮಿಯನ್ನು ದಾಟಿ 1 ಕಿ.ಮೀ ವರೆಗೆ ಬೈಕ್, ಜೀಪ್ ಹೋಗುತ್ತವೆ. ಅಲ್ಲಿಂದ ಮುಂದೆ ಯಾವುದೇ ವಾಹನ ಹೋಗುವುದಿಲ್ಲ. ಅಲ್ಲಿ ಮಣ್ಣಿನ ರಸ್ತೆಯಿದ್ದು ಕಾಲ್ನಡಿಗೆ ಅನಿವಾರ್ಯ. ಸುಮಾರು 2.5 ಕಿ.ಮೀ ಕ್ರಮಿಸಿದ ನಂತರ ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿ ಹಾದು ಹೋಗಿದೆ. ವಿದ್ಯುತ್ ಲೈನ್ ಹೋದ ಕಡೆ ಸಾಗಿದರೆ ರಾಚನಹಳ್ಳ ನಾಲಾದಲ್ಲಿ ಮಾಣಿಕಪುರ ಜಲಪಾತ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.