ADVERTISEMENT

ಮಾರುತೇಶ್ವರ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 13:22 IST
Last Updated 11 ಸೆಪ್ಟೆಂಬರ್ 2021, 13:22 IST
ಮಾರಡಗಿ ಗ್ರಾಮದ ಸರ್ವಾಲಂಕೃತ ಮಾರುತೇಶ್ವರ
ಮಾರಡಗಿ ಗ್ರಾಮದ ಸರ್ವಾಲಂಕೃತ ಮಾರುತೇಶ್ವರ   

ಕಲಬುರ್ಗಿ: ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಮಾರಡಗಿಯಲ್ಲಿ ಶನಿವಾರ ಮಾರುತೇಶ್ವರನ ಪಲ್ಲಕ್ಕಿ ಉತ್ಸವ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.

ಸತತ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ನಡೆದ ನಿರಂತರ ಪೂಜೆ ಸಂಪನ್ನಗೊಂಡಿತು. ಭೀಮಾ ನದಿ ದಂಡೆ ಮೇಲೆ ನೆಲೆಸಿರುವ ಮಾರುತೇಶ್ವರನ ಖಾಂಡಗೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ಮೊದಲು ಗಂಗಾಸ್ಥಳಕ್ಕೆ ತೆರಳಿದ ಪಲ್ಲಕ್ಕಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಈ ವೇಳೆ ಗ್ರಾಮದ ಸಮಸ್ತ ಮುಖಂಡರು ಹಾಗು ಭಕ್ತಾದಿಗಳು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.