ADVERTISEMENT

ಶಾಸಕ ಪ್ರಿಯಾಂಕ್ ಖರ್ಗೆಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 14:49 IST
Last Updated 15 ಜನವರಿ 2022, 14:49 IST
 ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಶನಿವಾರ ಕೋವಿಡ್ ದೃಢಪಟ್ಟಿದೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, 'ಮೊದಲ ಹಾಗೂ ಎರಡನೆಯ ಅಲೆಯಲ್ಲಿ ನಾನು ಪಾರಾಗಿದ್ದೆ. ಒಮ್ಮೆ ಸುಳ್ಳು ಪಾಸಿಟಿವ್ ವರದಿ ಕೂಡ ಬಂದಿತ್ತು. ಇದರಿಂದ ಪದೇಪದೇ ತಪಾಸಣೆ ಮಾಡಿಸಿದಾಗಲೂ ನೆಗೆಟಿವ್ ವರದಿ ಬಂದಿತ್ತು. ಆದರೆ ಈಗ ಪಾಸಿಟಿವ್ ವರದಿ ಬಂದಿದೆ. ನನ್ನ ಸಿಬ್ಬಂದಿಗೂ ಪರೀಕ್ಷೆ ಮಾಡಿದ್ದು, ಅವರಿಗೆ ಸೋಂಕು ತಗಲಿಲ್ಲ' ಎಂದು ಬರೆದುಕೊಂಡಿದ್ದಾರೆ.

'ನನ್ನ ಜತೆ ಸಂಪರ್ಕ ಹೊಂದಿರುವ ಎಲ್ಲರೂ ಕೂಡ ಕೊರೊನಾ ತಪಾಸಣೆಗೆ ಒಳಗಾಗುವಂತೆ' ಅವರು ವಿನಂತಿಸಿದ್ದಾರೆ.

ADVERTISEMENT

ಸದ್ಯ ಶಾಸಕರು ಬೆಂಗಳೂರಿನ ತಮ್ಮ ಮನೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.