ADVERTISEMENT

ಸಹಕಾರ ನೀಡಲು ಸಂಸದ ಮನವಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:36 IST
Last Updated 3 ಏಪ್ರಿಲ್ 2020, 16:36 IST
ಡಾ.ಉಮೇಶ ಜಾಧವ
ಡಾ.ಉಮೇಶ ಜಾಧವ   

ಕಲಬುರ್ಗಿ: ‘ಕೊರನಾ ವೈರಾಣು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿವೆ. ಲಾಕ್‌ಡೌನ್‌ನಿಂದ ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ನಿರಂತರ ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಜನರು ಮನೆಯಿಂದ ಹೊರಗೆ ಬರದೇ ಸಹರಿಸಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಮನವಿ ಮಾಡಿಕೊಂಡಿದ್ದಾರೆ.

‘ಏಪ್ರಿಲ್‌ 14ರವರೆಗೂ ಲಾಕ್‌ಡೌನ್‌ ಇರಲಿದೆ. ಈ ಸಂದರ್ಭ ಜನ ಜೀವನ ದುಸ್ತರವಾಗದಿರಲಿ ಎಂದು ಪ್ರಧಾನಿ ಮೋದಿ ₹ 1.75 ಲಕ್ಷ ಕೋಟಿಯ ಪ್ಯಾಕೇಜ್‌ ನೀಡಿದ್ದಾರೆ. ಇದರಲ್ಲಿ ರೈತರಿಗೆ ಕಿಸಾನ್‌ ಸಮ್ಮಾನ್‌ ಮೂಲಕ ₹ 2 ಸಾವಿರ, ಕಾರ್ಮಿಕರಿಗೆ ಎರಡು ತಿಂಗಳಿಗೆ ₹ 2 ಸಾವಿರ, ಜನಧನ ಖಾತೆ ಹೊಂದಿದ ಮಹಿಳೆಯರಿಗೆ ಮೂರು ತಿಂಗಳಿಗೆ ಪ್ರತಿ ತಿಂಗಳು ₹ 500, ಪ್ರತಿ ತಿಂಗಳು ಒಂದು ಉಚಿತ ಗ್ಯಾಸ್‌ ಸಿಲಿಂಡರ್‌ ಘೋಷಿಸಿದ್ದಾರೆ. ಜನ ಭಯ ಪಡುವ ಅಗತ್ಯವಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸೋಂಕಿತರ ಸೇವೆಯಲ್ಲಿ ನಿರತರಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ₹ 50 ಲಕ್ಷದ ಜೀವವಿಮೆ ನೆರವು ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಎರಡು ತಿಂಗಳ ಪಡಿತರವನ್ನು ಮುಂಚುತವಾಗಿ ನೀಡುತ್ತಿದೆ. ವಿವಿಧ ಫಲಾನುಭವಿಗಳಿಗೆ ಎರಡು ತಿಂಗಳ ಮಾಸಾಶನವನ್ನು ಮುಂಚಿತವಾಗಿ ಸಂದಾಯ ಮಾಡಿದೆ. ಇದೆಲ್ಲವನ್ನು ಸಬ್ದಳಕೆ ಮಾಡಿಕೊಂಡು, ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.