ADVERTISEMENT

ಮಗನ ನೋಡಲು ಬಂದು ಪತ್ನಿಯಿಂದ ಕೊಲೆಯಾದ ಯುವಕ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 16:03 IST
Last Updated 2 ಆಗಸ್ಟ್ 2024, 16:03 IST

ಕಲಬುರಗಿ: ತನ್ನ ಪುಟ್ಟ ಮಗನನ್ನು ಕಾಣಲೆಂದು ಬಂದ ಆಟೊ ಚಾಲಕನು ಪತ್ನಿ ಹಾಗೂ ಆಕೆಯ ಕುಟುಂಬದ ಸದಸ್ಯರಿಂದಲೇ ಬರ್ಬರವಾಗಿ ಕೊಲೆಯಾದ ಘಟನೆ ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರೀನ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಕಲಬುರಗಿಯ ಕನಕನಗರದ ನಿವಾಸಿ ಈಶ್ವರ ಚಿತ್ತಾಪೂರ (25) ಕೊಲೆಯಾದ ವ್ಯಕ್ತಿ. ಸಂಬಂಧಿಯಾದ ರಂಜಿತಾಳೊಂದಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ, ಗಂಡ ತನಗೆ ಹೊಡೆಯುತ್ತಾನೆ ಎಂಬ ಕಾರಣಕ್ಕೆ ರಂಜಿತಾ ತವರು ಮನೆಗೆ ಬಂದಿದ್ದರು.

ಈಶ್ವರ ಗುರುವಾರ ರಾತ್ರಿ ಮಗನನ್ನು ನೋಡಲು ಪತ್ನಿಯ ತವರುಮನೆ ಇರುವ ಗ್ರೀನ್ ಪಾರ್ಕ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಆಗ ಪತ್ನಿ ರಂಜಿತಾ, ಆಕೆಯ ತಾಯಿ ಜಯಶ್ರೀ ವೈಜನಾಥ, ಸಹೋದರ ರಂಜಿತ ಸೇರಿಕೊಂಡು ಈಶ್ವರನ ಕೈಕಾಲು ಕಟ್ಟಿ ಕುತ್ತಿಗೆಗೆ ಉರುಳು ಹಾಕಿ ಕೊಲೆ ಮಾಡಿದ್ದಾರೆ. ಕುರುಪಿ, ದೋಸೆ ಹಂಚಿನಿಂದಲೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.