
ಪ್ರಜಾವಾಣಿ ವಾರ್ತೆ
ಕಲಬುರಗಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೆಯು ಕಲಬುರಗಿ, ವಾಡಿ ಮೂಲಕ ಮುಂಬೈ–ಹೈದರಾಬಾದ್ ನಡುವೆ ವಿಶೇಷ ರೈಲು ಸೇವೆ ಆರಂಭಿಸಿದೆ.
ಹೈದರಾಬಾದ್-ಎಲ್‌ಟಿಟಿ ಮುಂಬೈ (07458) ವಿಶೇಷ ರೈಲು ಡಿಸೆಂಬರ್ 28ರಂದು ಸಂಜೆ ಹೈದರಾಬಾದ್‌ನಿಂದ ಹೊರಟಿದ್ದು, ಬೇಗಂಪೇಟ್, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ವಾಡಿ, ಕಲಬುರಗಿ, ಸೋಲಾಪುರ, ಪುಣೆ, ಕಲ್ಯಾಣ್ ಮಾರ್ಗವಾಗಿ ಮರುದಿನ ಬೆಳಿಗ್ಗೆ 10.40ಕ್ಕೆ ಮುಂಬೈ ತಲುಪಲಿದೆ.
ಅದೇ ರೀತಿ ಎಲ್‌ಟಿಟಿ ಮುಂಬೈ-ಹೈದರಾಬಾದ್ ವಿಶೇಷ ರೈಲು (07459) ಡಿಸೆಂಬರ್ 29ರಂದು ಮಧ್ಯಾಹ್ನ 3.20ಕ್ಕೆ ಎಲ್‌ಟಿಟಿ ಮುಂಬೈನಿಂದ ಹೊರಟು ಮರುದಿನ ಬೆಳಿಗ್ಗೆ 9ಕ್ಕೆ ಹೈದರಾಬಾದ್ ತಲುಪಲಿದೆ ಎಂದು ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.