ಜೇವರ್ಗಿ: ‘ಜೆಡಿಎಸ್ ಪಕ್ಷದ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕು ಘಟಕದಿಂದ ಬೃಹತ್ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನಯನ್ನು ಜುಲೈ 4ರಂದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ಮಹಿಬೂಬ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ' ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಿಳಿಸಿದ್ದಾರೆ.
ಸಮಾವೇಶದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಜೆಡಿಎಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ನಿಖಿಲ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ 58 ದಿನ 110 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಜುಲೈ 4ರಂದು ಬೆಳಿಗ್ಗೆ 11.30ಕ್ಕೆ ವಚನಕಾರ ಷಣ್ಮುಖ ಶಿವಯೋಗಿಗಳ ಮಠಕ್ಕೆ ಹಾಗೂ ಮಹಾಲಕ್ಷ್ಮಿ ಮಂದಿರಕ್ಕೆ ತೆರಳಿ ನಿಖಿಲ ಕುಮಾರಸ್ವಾಮಿ ದರ್ಶನ ಪಡೆಯುವರು. ನಂತರ ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ಬೈಕ್ ಹಾಗೂ ಕಾರ್ ರ್‍ಯಾಲಿ ನಡೆಸಲಾಗುವುದು. ನಂತರ ನಡೆಯುವ ಸಮಾವೇಶದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.
ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಸಚಿವ ಹಣಮಂತಪ್ಪ ಅಲ್ಕೋಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ದಂಡಪ್ಪ ಸಾಹು ಕುರಳಗೇರಾ, ರಮೇಶ್ ಬಾಬು ವಕೀಲ, ಶಿವಾನಂದ ದ್ಯಾಮಗೊಂಡ, ಬಸವರಾಜಗೌಡ ಮಾಲಿಪಾಟೀಲ, ಎಸ್.ಎಸ್.ಸಲಗರ, ಪುಂಡಲೀಕ ಗಾಯಕವಾಡ, ಸಾಯಬಣ್ಣ ದೊಡ್ಮನಿ, ಸಿದ್ದಣ್ಣ ಹೂಗಾರ, ಪ್ರಭು ಜಾಧವ, ರವೂಫ್ ಹವಾಲ್ದಾರ್, ಗೊಲ್ಲಾಳಪ್ಪ ಕಡಿ, ಧರ್ಮು ಜೋಗೂರ, ಸಿದ್ದಣ್ಣ ಗಡ್ಡದ್, ಭೀಮರಾಯ ನಾಟೀಕಾರ, ಶರಣಗೌಡ ಹಾಲಗಡ್ಲಾ, ಶರಣಗೌಡ ಯಲಗೋಡ, ಶರಣು ಹೊಸಮನಿ, ಗುರುಗೌಡ ಮಾಲಿಪಾಟೀಲ, ವಿಶ್ವನಾಥ ಇಮ್ಮಣ್ಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.