ADVERTISEMENT

ಜೈಲಿನ ಮೇಲೆ ಪೊಲೀಸರ ದಾಳಿ; ₹1.62 ಲಕ್ಷ, 4 ಮೊಬೈಲ್‌ ವಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:24 IST
Last Updated 29 ಡಿಸೆಂಬರ್ 2022, 4:24 IST
   

ಕಲಬುರಗಿ: ನಗರ ಹೊರವಲಯದಲ್ಲಿ ಇರುವ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಬುಧವಾರ ದಾಳಿ ನಡೆಸಿದರು.

ಡಿಸಿಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತಾಲಯದ ಎಲ್ಲ ಅಧಿಕಾರಿಗಳು ಹಾಗೂ 90ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ಮಾಡಿ, ಜೈಲಿನ ಹಲವು ಕೋಣೆಗಳಲ್ಲಿ ಶೋಧ ಕಾರ್ಯ ನಡೆಸಿದರು. ಪ್ರಸ್ತುತ ಜೈಲಿನಲ್ಲಿ ಹಲವು ರೌಡಿಗಳು ಜೈಲಿನಿಂದ ಕರೆ ಮಾಡಿ, ಕೆಲವರಿಗೆ ಬೆದರಿಕೆ ಹಾಕುತ್ತಿದ್ದರು. ದಾಳಿ ವೇಳೆ ಜೈಲಿನಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ಕೈದಿಗಳ ಬಳಿ ಇದ್ದ ನಾಲ್ಕು ಮೊಬೈಲ್‌ ಸೇರಿದಂತೆ ನಗದು ಹಣ ಪತ್ತೆಯಾಗಿದೆ. ದಾಳಿಯಲ್ಲಿ ಸುಮಾರು ₹1.62 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್ರವಿಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT