ಜೇವರ್ಗಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳನ್ನು ಎಸ್‌ಡಿಎಂಸಿ ಅಧ್ಯಕ್ಷ ಖಾಸಗಿ ವಾಹನದ ಮೂಲಕ ಶಾಲೆಗೆ ಕರೆದೊಯ್ದು, ಸಂಜೆ ಮತ್ತೆ ಕರೆತಂದಿದ್ದಾರೆ.
ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಪಟ್ಟಣದಿಂದ ತೆರಳುವ ವಿದ್ಯಾರ್ಥಿಗಳು ಎಂದಿನಂತೆ ಸರ್ಕಾರಿ ಬಸ್‌ಗಾಗಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಕಾಯುತ್ತಾ ಕುಳಿತಿದ್ದರು. ಶಾಲೆಯ ಸಮಯವಾದರೂ ಬಸ್ ಬಾರದೇ ಇದ್ದುದ್ದನ್ನು ಗಮನಿಸಿದ ಆದರ್ಶ ವಿದ್ಯಾಲಯದ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಣಗೌಡ ಪಾಟೀಲ ಚನ್ನೂರ ಬಸ್ ಘಟಕದ ವ್ಯವಸ್ಥಾಪಕರಿಗೆ ಕರೆ ಮಾಡಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಆದರೂ, ಬಸ್ ಬಾರದೇ ಇದ್ದಾಗ ಖಾಸಗಿ ವಾಹನದಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ಎರಡು ಟ್ರಿಪ್ ಮೂಲಕ ಶಾಲೆಗೆ ಡ್ರಾಪ್ ಮಾಡಿದ್ದಾರೆ. ಶಾಲೆ ಬಿಟ್ಟ ನಂತರ ಮರಳಿ ಕರೆತಂದಿದ್ದಾರೆ. ಎಸ್.ಡಿ.ಎಂ.ಸಿ ಅಧ್ಯಕ್ಷರ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.