ADVERTISEMENT

‘ಕಲಬುರ್ಗಿ ಜವಳಿ ಪಾರ್ಕ್‌ ಮೈಸೂರಿಗೆ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 15:58 IST
Last Updated 6 ಮಾರ್ಚ್ 2021, 15:58 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರ್ಗಿ: ‘ಕಲಬುರ್ಗಿಗೆ ಮಂಜೂರಾಗಿದ್ದ ಜವಳಿ ಪಾರ್ಕ್‌ ಅನ್ನುಮೈಸೂರಿನಲ್ಲಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಇದು ಈ ಭಾಗಕ್ಕೆ ಮಾಡಿದ ಅನ್ಯಾಯ’ ಎಂದುಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್‌ ಖರ್ಗೆ ಕಿಡಿ ಕಾರಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಜವಳಿ ಪಾರ್ಕ್‌ಅನ್ನುಸಿ.ಎಂ ಅವರೇ ಕಿತ್ತುಕೊಂಡು ಮೈಸೂರಿಗೆ ಕೊಟ್ಟಿದ್ದಾರೆ.ಕಲಬುರ್ಗಿ ಸಂಸದರಾದ ಉಮೇಶ ಜಾಧವ ಅವರಿಗೆ ‘ಅಭಿನಂದನೆ’’ ಎಂದು ಮೂದಲಿಸಿದ್ದಾರೆ.

‘ಇದು ಕಲಬುರ್ಗಿಗೆ ನಷ್ಟ, ಮೈಸೂರಿಗೆ ಲಾಭ. ಬಿಜೆಪಿ ನಾಯಕರ ಕಿರೀಟಕ್ಕೆ ಮತ್ತೊಂದು ಗರಿ‌, ಅಭಿನಂದನೆಗಳು ನಿಮಗೆ. ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಅನುದಾನಕ್ಕಾಗಿ‌ ಕಲಬುರ್ಗಿಯ ಜನತೆ ವಿಧಾನಸೌಧದ ಮುಂದೆ ಭಿಕ್ಷೆ ಬೇಡಲು ಪ್ರಾರಂಭಿಸಬೇಕಾಗುತ್ತದೆ’ ಎಂದೂ ಪ್ರಿಯಾಂಕ್‌ ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.