ADVERTISEMENT

ಚಿತ್ತಾಪುರ | ಬಸವಣ್ಣನ ಪುತ್ಥಳಿಗೆ ಅಪಮಾನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:34 IST
Last Updated 28 ಜೂನ್ 2022, 5:34 IST
ಆಳಂದ ತಾಲ್ಲೂಕು ಆಡಳಿತದ ಮುಂದೆ ಚಿತ್ತಾಪುರದಲ್ಲಿ ಬಸವಣ್ಣನ ಪುತ್ಥಳಿ ಅವಮಾನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು
ಆಳಂದ ತಾಲ್ಲೂಕು ಆಡಳಿತದ ಮುಂದೆ ಚಿತ್ತಾಪುರದಲ್ಲಿ ಬಸವಣ್ಣನ ಪುತ್ಥಳಿ ಅವಮಾನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು   

ಆಳಂದ: ಚಿತ್ತಾಪುರ ಪಟ್ಟಣದಲ್ಲಿ ಬಸವಣ್ಣನ ಪುತ್ಥಳಿಗೆ ಅವಮಾನ ಮಾಡಿದ ಘಟನೆ ಖಂಡಿಸಿ ಸೋಮವಾರ ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ಹಾಗೂ ಪಂಚಮಸಾಲಿ ಯುವ ಘಟಕದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರ ಮೂಲಕ ಮನವಿ ಸಲ್ಲಿಸಿ ಕಿಡಿಗೇಡಿಗಳನ್ನು ಬಂಧಿಸಲು ಒತ್ತಾಯಿಸಲಾಯಿತು.

ಮುಖಂಡರಾದ ಸಿದ್ದು ಹಿರೋಳಿ, ಆನಂದ ದೇಶಮುಖ ಮಾತನಾಡಿ ಬಸವಣ್ಣನವರು ಸಕಲ ಜೀವಾತ್ಮರ ಕಲ್ಯಾಣ ಬಯಸಿದ್ದಾರೆ. ಅಂತಹ ಮಹಾನ್ ದಾರ್ಶನಿಕರಿಗೆ ಅಪಮಾನ ಮಾಡಿದ ವ್ಯಕ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಎಚ್‌ಪಿ ತಾಲ್ಲೂಕಾಧ್ಯಕ್ಷ ಗುಂಡು ಗೌಳಿ, ಶ್ರೀರಾಮ ಸೇನೆ ಅಧ್ಯಕ್ಷ ಈರಣ್ಣಾ ಹತ್ತರಕಿ, ಪಡಸಾವಳಿ ಗ್ರಾಪಂ ಅಧ್ಯಕ್ಷ ಪ್ರಕಾಶ ಬೇಳಾಂ, ಪ್ರಮುಖರಾದ ದತ್ತಾ ಪಾಟೀಲ, ಮಲ್ಲು ಕರಲಗಿ, ಗುರು ಉಡಗಿ, ಸಂಜಯ ದೇಶಮುಖ, ಮಿಥುನ ರಾಠೋಡ, ಸಂತೋಷ ಹೂಗಾರ, ಚೆನ್ನಪ್ಪ ಹತ್ತರಕಿ, ಸಿದ್ದು ಹತ್ತಿ, ಕುಮಾರ ನಿಂಗಶೆಟ್ಟಿ, ಮಹೇಶ ಕೊರಳ್ಳಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.