ಕಲಬುರಗಿ: ಕೃಷಿ, ಹೈನುಗಾರಿಕೆ, ಶಿಕ್ಷಣ ಸಾಲವನ್ನು ತ್ವರಿತವಾಗಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಮುಖಂಡರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿನ ಎಸ್‌ಬಿಐನ ಎಜಿಎಂ ಶಾಖೆಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬ್ಯಾಂಕ್‌ಗಳು ರೈತರಿಗೆ ಬೆಳೆ ಸಾಲ, ವ್ಯಾಪಾರಿಗಳಿಗೆ ಮುದ್ರಾ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಯಾವುದೇ ತಕರಾರು ಮಾಡದೆ ಮೇ 30ರ ಒಳಗಾಗಿ ನೀಡಬೇಕು. ಕೃಷಿಕರು ತಮ್ಮ ಪಹಣಿಗಳನ್ನು ಸಹಕಾರಿ ಬ್ಯಾಂಕ್‌ಗಳಲ್ಲಿ ಇರಿಸಿ ಸಾಲ ಪಡೆದಿದ್ದರೂ ಆ ಪಹಣಿಗಳ ಮೇಲೂ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.
ರೈತರ ಚಿನ್ನಾಭರಣವನ್ನು ಇರಿಸಿಕೊಂಡು ಸಾಲ ಕೊಡುವುದನ್ನು ಕೈಬಿಡಬೇಕು. ಜೂನ್ ತಿಂಗಳಿಂದ ಮುಂಗಾರು ಶುರುವಾಗಲಿದ್ದು, ಬಿತ್ತನೆ ಬೀಜ, ಗೊಬ್ಬರ ಖರೀದಿಗಾಗಿ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು ಎಂದು ಕೋರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ದೇವಿಂದ್ರಪ್ಪ ಪಾಟೀಲ, ಸಿದ್ದಪ್ಪ ಭೂತಾಳೆ, ನಾಗಯ್ಯ ಸ್ವಾಮಿ, ಜಾವೇದ್ ಹಸನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.