ಕಲಬುರಗಿ:ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದ ಸಂಗೊಳ್ಳಿ ರಾಯಣ್ಣ ಚೌಕ ಹತ್ತಿರ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಾರಣ, ಮೂವರಿಗೆ ₹ 63 ಸಾವಿರ ದಂಡ ವಿಧಿಸಿ3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಗದೀಶ ವಿ.ಎನ್. ಅವರು ತೀರ್ಪು ನೀಡಿದ್ದಾರೆ.
ಸೈಯದ್ ಮೈನೋದ್ದಿನ್ ಸೈಯದ್ ಜಾಫರ್ ಜಮಾದಾರ, ಸೈಯದ್ ಮಥಿನ್ ಸೈಯದ್ ಮೈನೋದ್ದಿನ್ ಜಮಾದಾರ, ಹುಸೇನ್ ಭಾಷಾ ಖಲೀಲ್ ಹುಸೇನಿ ಜಮಾದಾರ ಶಿಕ್ಷೆಗೆ ಒಳಗಾದವರು. ಇದೇ ಗ್ರಾಮದಚಂದ್ರಕಾಂತ ಶರಣಪ್ಪ ಆಲೂರು ಎನ್ನುವವರು ಹೊಲದಲ್ಲಿ ಹೋರಿ ಬಿಟ್ಟು ಬೆಳೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿ, ಮೂವರೂ ಸೇರಿದಕೊಂಡು ಕಲ್ಲಿನಿಂದ ಹಲ್ಲೆ ಮಾಡಿದ್ದರು. ಜಗಳ ಬಿಡಿಸಲು ಬಂದ ಚಂದ್ರಕಾಂತ ಅವರ ತಾಯಿ ಶಾಂತಮ್ಮ ಅವರಿಗೂ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನ ಮಾಡಿದ್ದರು.
ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.