ADVERTISEMENT

ಜಿಲ್ಲೆಯಲ್ಲಿ ಉತ್ತಮ ಮಳೆ; ರೈತರ ಸಂತಸ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:09 IST
Last Updated 7 ಜುಲೈ 2022, 4:09 IST

ಕಲಬುರಗಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯಿತು. ನೀರಿನ ಕೊರತೆಯಿಂದ ಬಾಡುತ್ತಿದ್ದ ಹೆಸರು, ಹತ್ತಿಯಂತಹ ವಿವಿಧ ಬೆಳೆಗಳು ಚೇತರಿಸಿಕೊಂಡಿವೆ. ಇದರಿಂದ ರೈತರ ಮೊಗದಲ್ಲಿ ಸಂತಸ ಉಂಟು ಮಾಡಿದೆ. ತೊಗರಿ, ಸೋಯಾ ಬಿತ್ತನೆಯ ಕೃಷಿ ಚಟುವಟಿಕೆಗಳು ಚುರುಕೊಂಡಿವೆ.

ಮಂಗಳವಾರ ರಾತ್ರಿ ಬಿರುಸಿನ ಹಾಗೂ ಬುಧವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು. ಇದರಿಂದ ಕೆಲವು ಕಡೆ ಹಳ್ಳ–ಕೊಳ್ಳ ತುಂಬಿ ಹರಿದು ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಲಬುರಗಿ ತಾಲ್ಲೂಕಿನ ಮುತ್ಯಾನ್ ಬಬಲಾದ್ ಗ್ರಾಮದಲ್ಲಿ ಹಳ್ಳ ತುಂಬಿ ಹರಿದಿದೆ. ಇದರಿಂದ ಬಬಲಾದ್, ಶ್ರೀಚಂದ್, ಹೊಡಲ್, ಅಪಚಂದ್ ಗ್ರಾಮಗಳಿಗೆ ರಸ್ತೆ ಸಂಪರ್ಕಕ್ಕೆ ತೊಂದರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT