
ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲಾ- ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಸೋಮವಾರ ನಡೆಯಿತು.
ಪಟ್ಟಣದ ಪಿಯು ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ ಇದ್ದರು.
ಹುಲಿಹೈದರ: ಸಮೀಪದ ಹುಲಿಹೈದರ ಗ್ರಾಪಂ ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಕೆಲ್ಲೂರ್ ಧ್ವಜಾರೋಹಣ ನೆರವೇರಿಸಿದರು.
ಚುನಾವಣಾ ಆಯೋಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆಯ ವಿದ್ಯಾರ್ಥಿನಿ ಇಮಾಂಬಿ ಆಲಂಪಾಷ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹನುಮೇಶ ನಾಯಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಚಾರ ಅಧ್ಯಕ್ಷ ರಮೇಶ ನಾಯಕ, ಕೆಡಿಪಿ ಸದಸ್ಯ ಹುಸೇನಸಾಬ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜಮಹ್ಮದ್, ಮುಖಂಡರಾದ ಅಮರಪ್ಪ ಗದ್ದಿ, ಗೋಸಲಪ್ಪ ಗದ್ದಿ, ಪರಸಪ್ಪ ಜಾಡಿ, ಶರಣಪ್ಪ ಗದ್ದಿ ಇತರರು ಇದ್ದರು.
ತಾಲ್ಲೂಕು ಪಂಚಾಯಿತಿ ಕಚೇರಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ತಾಪಂ ಪ್ರಭಾರ ಇಒ ಕೆ.ರಾಜಶೇಖರ ಧ್ವಜಾರೋಹಣ ನೆರವೇರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಜರತಹುಸೇನ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕಿ ಶರಪುನ್ನಿಸಾ ಬೇಗಂ, ಕೆಡಿಪಿ ಸದಸ್ಯ ಶರಣಪ್ಪ ತೆಗ್ಗಿನಮನಿ, ಎಫ್‌ಡಿಎ ಹನುಮಂತ, ವಿಷಯ ನಿರ್ವಾಹಕ ಕೊಟ್ರಯ್ಯ ಸ್ವಾಮಿ, ಹನುಮವ್ವ, ಕೆ.ಪವನಕುಮಾರ್, ಯಂಕೋಬ, ಹಾಗೂ ಶಿವಕುಮಾರ ಇದ್ದರು.
ಬಿಲಾಲ್ ಮಸೀದಿ ಸಮಿತಿ: ಇಲ್ಲಿನ ಬಿಲಾಲ್ ಮಸೀದಿ ಆವರಣದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಧ್ವಜಾರೋಹಣ ನೆರವೇರಿಸಿದರು.
ಕ್ಷೇತ್ರ ಸಮಿತಿ ಸದಸ್ಯ ಮೈಬೂಬ್ ಸೂಳೇಕಲ್, ನಗರ ಸಮಿತಿ ಅಧ್ಯಕ್ಷ ಅಲ್ಲಾಭಕ್ಷಿ, ಕಾರ್ಯದರ್ಶಿ ರಿಯಾಜ್, ಲಿಂಗಪ್ಪ ನಾಯಕ ಜಿರಾಳ, ಬಿಲಾಲ್ ಮಸೀದಿ ಸಮಿತಿಯ ಹೊನ್ನೂರಸಾಬ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.