ಚಿಂಚೋಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ 2025 ಅಕ್ಟೋಬರ್ 2ರಿಂದ 2026ರ ವಿಜಯದಶಮಿವರೆಗೆ ವರ್ಷವಿಡಿ ಒಟ್ಟು 7 ರೀತಿಯ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ತಿಳಿಸಿದರು.
ಇಲ್ಲಿನ ದೇವಡಿಯಲ್ಲಿ ಸಂಘ ಹಮ್ಮಿಕೊಂಡ ಹಿಂದೂ ಸಾಮ್ರಾಜ್ಯೋತ್ಸವದಲ್ಲಿ ಮಾತನಾಡಿದರು.
‘ವಿಜಯದಶಮಿ ಹಬ್ಬದಂದು ಶಾಖಾಮಟ್ಟದ ಪಥ ಸಂಚಲನ, ಅಕ್ಟೋಬರ್‌ನಲ್ಲಿ ತಾಲ್ಲೂಕು ಮಟ್ಟದ ಬೃಹತ್ ಪಥಸಂಚಲನ, ನವೆಂಬರ್-ಡಿಸೆಂಬರ್‌ನಲ್ಲಿ ಮನೆ ಸಂಪರ್ಕ, ಜನವರಿಯಲ್ಲಿ ಹೋಬಳಿ ಮಟ್ಟದ ಹಿಂದೂ ಸಮಾವೇಶ, ಗಣ್ಯ ನಾಗರಿಕರ ಸಭೆ, ಸಕಲ ಸಮಾಜದ ಪ್ರಮುಖರ ಸಭೆ ಎಲ್ಲ ಗ್ರಾಮಗಳಲ್ಲಿ ಶಾಖೆ ಸ್ಥಾಪನೆ ಮುನ್ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಸಂಘದ ಜಿಲ್ಲಾ ಮುಖ್ಯಮಾರ್ಗಗಳ ಪ್ರಮುಖ ರವೀಂದ್ರ ಕಾನಾಗಡ್ಡ ಮಾತನಾಡಿ, ‘ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ಸಂಭ್ರಮಿಸಲು ಸಂಘದ ಹಿಂದೂ ಸಾಮ್ರಾಜ್ಯೋತ್ಸವ ಹಮ್ಮಿಕೊಂಡಿದೆ. ಸಂಘದ ಸ್ಥಾಪಕ ಹೆಡಗೆವಾರ ಮತ್ತು ಶಿವಾಜಿ ಜೀವನದಲ್ಲಿ ಸಾಮ್ಯತೆಯನ್ನು ವಿವರಿಸಿದರಲ್ಲದೇ, ಶಿವಾಜಿ ಮಹಾರಾಜರು ಬಾಲಕರಿದ್ದಾಗಲೇ ಗೋಹತ್ಯೆ, ಸ್ತ್ರೀ ಶೋಷಣೆ ವಿರುದ್ಧ ಪ್ರತಿಭಟಿಸಿದ್ದರು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಜಗನ್ನಾಥ ಶೇರಿಕಾರ ಹಿಂದೂ, ಹಿಂದುತ್ವ ಮತ್ತು ಹಿಂದೂಸ್ಥಾನ ಕುರಿತು ಮಾತನಾಡಿದರು. ಆಕಾಶ ಕನಕಪುರ ಧ್ವಜಾರೋಹಣ ನಡೆಸಿದರು. ಭಾಸ್ಕರ್ ಕುಲಕರ್ಣಿ, ಕಿರಣ ಪಂಚಾಳ ಪ್ರಾರ್ಥಿಸಿದರು. ಶ್ರೀಹರಿ ಕಾಟಾಪುರ ಸ್ವಾಗತಿಸಿದರು. ಸೂರ್ಯಕಾಂತ ಚಿಂಚೋಳಿ ನಿರೂಪಿಸಿದರು. ಗೋಪಾಲ ಸುತ್ರಾವೆ ವಂದಿಸಿದರು.
ನಿವೃತ್ತ ಶಿಕ್ಷಕ ಸಂಗಪ್ಪ ಪಾಲಾಮೂರ, ಕಿಶನರಾವ ಕಾಟಾಪುರ, ಜಗದೀಶಸಿಂಗ್ ಠಾಕೂರ, ಶ್ರೀನಿವಾಸ ಪಾಟೀಲ, ರೇವಣಸಿದ್ದ ಮೋಘಾ, ಸಂತೋಷ ಗಡಂತಿ, ಶಂಕರಗೌಡ ಅಲ್ಲಾಪುರ, ನಾಗರಾಜ ಮಲಕೂಡ, ಶ್ರೀಮಂತ ಕಟ್ಟಿಮನಿ, ಹಣಮಂತ ಪೂಜಾರಿ, ಲೋಕೇಶ, ಶ್ರೀಕಾಂತ ಪಿಟ್ಟಲ್ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.