ADVERTISEMENT

‘ರಂಗಭೂಮಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ’

ಎಸ್‌.ಬಿ.ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 16:36 IST
Last Updated 18 ಜುಲೈ 2021, 16:36 IST
ಕಲಬುರ್ಗಿಯ ರಂಗಾಯಣದಲ್ಲಿ ಭಾನುವಾರ ನಡೆದ  ರಂಗಕರ್ಮಿಗಳಾದ ದೀಪಕ ಮೈಸೂರು ಮತ್ತು ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ ಎಸ್‌.ಬಿ.ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್‌.ಟಿ.ಪೋತೆ, ರಂಗಾಯಣ ನಿರ್ದೇಶಕ ಎಚ್.ಟಿ.ಪೋತೆ ಮತ್ತಿತರರು ಇದ್ದಾರೆ
ಕಲಬುರ್ಗಿಯ ರಂಗಾಯಣದಲ್ಲಿ ಭಾನುವಾರ ನಡೆದ  ರಂಗಕರ್ಮಿಗಳಾದ ದೀಪಕ ಮೈಸೂರು ಮತ್ತು ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ ಎಸ್‌.ಬಿ.ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್‌.ಟಿ.ಪೋತೆ, ರಂಗಾಯಣ ನಿರ್ದೇಶಕ ಎಚ್.ಟಿ.ಪೋತೆ ಮತ್ತಿತರರು ಇದ್ದಾರೆ   

ಕಲಬುರ್ಗಿ: ‘ಅನ್ಯ ಮಾಧ್ಯಮಗಳಿಗಿಂತ ರಂಗಮಾಧ್ಯಮವು ಹೆಚ್ಚು ಪ್ರಭಾವಶಾಲಿಯಾಗಿದೆ. ರಂಗಭೂಮಿಗೆ ಸಾಮಾಜಿಕ ಜವಾಬ್ದಾರಿಯು ಹೆಚ್ಚಿದೆ’ ಎಂದು ಕಲಬುರ್ಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ತಿಳಿಸಿದರು.

ರಂಗ ಸಂಗಮ ಕಲಾ ವೇದಿಕೆಯು ರಂಗಾಯಣದ ನಟರಂಗ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಂಗಕರ್ಮಿಗಳಾದ ದೀಪಕ ಮೈಸೂರು ಮತ್ತು ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ ಎಸ್‌.ಬಿ.ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ರಂಗಭೂಮಿಯು ಕ್ರಿಯಾಶೀಲ ಮಾಧ್ಯಮವಾಗಿದೆ. ಪ್ರೇಕ್ಷಕರ ಸಮ್ಮುಖ ಮತ್ತು ಪ್ರತಿಕ್ರಿಯೆಗಳ ಮುಖಾಮುಖಿಯಿಂದ ರಂಗಭೂಮಿಗೆ ಹೆಚ್ಚಿನ ಮಹತ್ವ ದೊರೆತಿದೆ’ ಎಂದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಲೋಕದ ಮಹತ್ವವನ್ನು ನಾಡಿನ ತುಂಬೆಲ್ಲ ಹರಡಬೇಕಿದೆ. ಪ್ರತಿಭಾವಂತರಿಗೆ ಹೆಚ್ಚಿನ ಮಾನ್ಯತೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ರಂಗಾಯಣ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಶ್ರಮಿಸುತ್ತಿವೆ’ ಎಂದರು.

‌ಪ್ರಶಸ್ತಿ ಪುರಸ್ಕೃತರಾದ ದೀಪಕ ಮೈಸೂರು ಮತ್ತು ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ರಂಗಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ. ಸುಜಾತಾ ಜಂಗಮಶೆಟ್ಟಿ, ರಂಗನಿರ್ದೇಶಕ ವಿಶ್ವರಾಜ ಪಾಟೀಲ, ಸ್ಫೂರ್ತಿ ಕಮರಡಗಿ, ಬಿ.ಎಚ್.ನಿರಗುಡಿ ಮಾತನಾಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಗಡಿಭಾಗದ ಚಲನಚಿತ್ರ ಮೇಳ ಸಂಚಾಲನಾ ಸಮಿತಿ ಸದಸ್ಯ ಮಹಿಪಾಲರೆಡ್ಡಿ ಮುನ್ನೂರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರವೀಣನಾಯಕ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಅಧ್ಯಕ್ಷತೆ ವಹಿಸಿದ್ದರು.

ನಾಟಕ ಪ್ರದರ್ಶನ: ಕಾರ್ಯಕ್ರಮದ ಬಳಿಕ ‘ಅವ್ಯಕ್ತ’ ಎಂಬ ಏಕವ್ಯಕ್ತಿ ನಾಟಕ ಪ್ರಯೋಗ ಪ್ರದರ್ಶನವಾಯಿತು.

ವಿಶ್ವರಾಜ ಪಾಟೀಲ ರಚಿಸಿ, ನಿರ್ದೇಶಿಸಿದ ಈ ನಾಟಕದಲ್ಲಿ ಸಮೀರ ಸುಬೇದಾರ ಅಭಿನಯಿಸಿದರು. ಪ್ರದರ್ಶನವನ್ನು ಹಿರಿಯ ಲೇಖಕ ಸಿದ್ಧರಾಮ ಹೊನ್ಕಲ್ ಉದ್ಘಾಟಿಸಿದರು. ಸೇಡಂನ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮತ್ತು ಡಾ.ಚಂದ್ರಕಲಾ ಬಿದರಿ ಅತಿಥಿಗಳಾಗಿದ್ದರು. ಡಾ.ಲಿಂಗರಾಜ ಶಾಸ್ತಿç, ಎಚ್.ಎಸ್.ಬಸವಪ್ರಭು, ಮಿಲಿಂದ ಮಡಕಿ, ಶರಣಬಸವ ಜಂಗಮಶೆಟ್ಟಿ, ಚಿನ್ನಮ್ಮ ಕಮರಡಗಿ, ಡಾ.ಶ್ರೀಶೈಲ ಬಿರಾದಾರ, ಶರಣಬಸಪ್ಪ ಹಾಗರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.