ADVERTISEMENT

ಕಲಬುರಗಿ: ಬಿಸಿಯೂಟ ಪರಿಕರ ಕದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:43 IST
Last Updated 23 ಜನವರಿ 2026, 7:43 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕಲಬುರಗಿ: ನಗರದ ಹೊರವಲಯದ ತಾಜಸುಲ್ತಾನಪುರದ ಗೌತಮ ಪೂರ್ಣ ಗ್ರಾಮೀಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಬಿಸಿಯೂಟ ಪರಿಕರಗಳು, ಶಾಲಾ ದಾಖಲಾತಿಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕಲಬುರಗಿಯ ಮಿಲ್ಲತ್‌ ನಗರ ನಿವಾಸಿ ಸೈಯದ್‌ ಬಾಬರ್‌ ಹುಸೇನ್‌ (34) ಹಾಗೂ ಮಿಜಗುರಿ ಪ್ರದೇಶದ ಖಲೀಲ್‌ ಅಹ್ಮದ್ (35) ಬಂಧಿತರು. ಆರೋಪಿಗಳಿಂದ ಒಟ್ಟು ₹ 2.60 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿಗಳು ಈ ಪ್ರಕರಣ ಮಾತ್ರವಲ್ಲದೇ ಒಂದು ವರ್ಷದ ಹಿಂದೆ ಬೇಲೂರು ಕ್ರಾಸ್‌ ಹತ್ತಿರ ಪೆಟ್ರೋಲ್‌ ಬಂಕ್‌ನಲ್ಲಿ ಏರ್‌ಗೇಜ್‌ ಕಳವು,  ಭೀಮಳ್ಳಿ ಗ್ರಾಮದಲ್ಲಿ ಮೋಟಾರ್‌ ಹಾಗೂ ಸ್ಪ್ರಿಂಕ್ಲರ್ ಪೈಪ್‌ ಕಳುವಾದ ಬಗೆಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್‌ ನಟರಾಜ ಲಾಡೆ, ಪಿಎಸ್ಐ ಶಶಿಕಲಾ, ಸಿಬ್ಬಂದಿ ಮಂಜುನಾಥ, ಫಿರೋಜ್‌, ಮಲ್ಲಿಕಾರ್ಜುನ, ಸುಲ್ತಾನ್, ಅಶೋಕ, ಅನೀಲ ಅವರ ತಂಡವು ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರಿದ್ದಾರೆ.

‘ಜನವರಿ 17ರ ಮಧ್ಯಾಹ್ನದಿಂದ ಜ.18ರ ಮಧ್ಯಾಹ್ನದೊಳಗೆ ಶಾಲಾ ದಾಖಲಾತಿಗಳು, ಮೂರು ಎಲ್‌ಪಿಜಿ ಸಿಲಿಂಡರ್‌ಗಳು, ಮೂರು ಒಲೆ, ನಾಲ್ಕು ದೊಡ್ಡ–ನಾಲ್ಕು ಚಿಕ್ಕ ಬೋಗಣಿಗಳು, ತಲಾ ನಾಲ್ಕು ಬುಟ್ಟಿ, ಬಕೆಟುಗಳು, ಎರಡು ಡಬ್ಬಿಗಳು, ತಲಾ 200 ಪ್ಲೇಟ್‌– ಗ್ಲಾಸ್‌ಗಳು, ಒಂದು ಆ್ಯಂಪ್ಲಿಫೈರ್‌, ಎರಡು ಧ್ವನಿವರ್ಧಕಗಳು, ಐದು ಡೆಸ್ಕ್‌, 6 ಚಮಚ, ಎರಡು ಕುಕ್ಕರ್‌, ಎರಡು ಡ್ರಮ್‌ಸೆಟ್‌ ಸೇರಿದಂತೆ ಹಲವು ವಸ್ತುಗಳನ್ನು ಕದ್ದಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸೋಮನಾಥ ಇಂಡಿ ಪೊಲೀಸರಿಗೆ ನೀಡಿದ್ದರು.

₹ 12 ಲಕ್ಷ ಪಡೆದು ವಂಚನೆ: ಆರೋಪ

ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ನಂಬಿಸಿದ ಯುವ ಉದ್ಯಮಿಯೊಬ್ಬ ಮೂವರಿಗೆ ₹ 12 ಲಕ್ಷ ವಂಚಿಸಿದ್ದಾರೆ. 

‘ಕಲಬುರಗಿಯ ಮುಸ್ಲಿಂ ಚೌಕ್‌ ಪ್ರದೇಶದ ಮೊಹಮ್ಮದ್ ತೌಸಿಫ್‌ ಪಟೇಲ್‌ ಎಂಬುವರು ಆರು ತಿಂಗಳಲ್ಲಿ ರಿಯಲ್‌ ಎಸ್ಟೇಲ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಮಾಡಿಕೊಡುವೆ ಎಂದು ನಂಬಿಸಿ ನನ್ನಿಂದ ₹ 3 ಲಕ್ಷ, ನಮ್ಮ ಸಂಬಂಧಿಕರಾದ ಸಮೀನಾ ಬೇಗಂ ಅವರಿಂದ ₹ 5 ಲಕ್ಷ ಹಾಗೂ ಅಫ್ರಾ ಅಲ್ಮಾಸ್‌ ₹ 4 ಲಕ್ಷವನ್ನು ಆತನ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದೆವು. ತೌಸಿಫ್‌ ಕೊಟ್ಟಿದ್ದ ಆರು ತಿಂಗಳ ಗಡುವು 2025ರ ಆಗಸ್ಟ್‌ಗೆ ಮುಗಿದಿದ್ದು, ನಾವು ಮರಳಿ ಹಣ ಕೇಳಿದರೆ ಕೊಡುತ್ತಿಲ್ಲ. ಪದೇಪದೆ ಹಣ ಕೇಳಿದರೆ ನಿಮ್ಮ ಹೆಸರಿನಲ್ಲಿ ಚೀಟಿ ಬರೆದಿಟ್ಟು ಸಾಯುವುದಾಗಿ ಬೆದರಿಸುತ್ತದ್ದಾನೆ’ ಎಂದು ಮೋಮಿನಪುರ ನಿವಾಸಿ, ಟ್ರಾನ್ಸ್‌ಪೋರ್ಟ್‌ ಉದ್ಯಮಿ ಮೊಹಮ್ಮದ್ ಇಂತೆಸಾರ ಮಹಿಬೂಬ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಚೌಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.