ADVERTISEMENT

ಸೇಡಂ: ಮತ್ತಷ್ಟು ಹೆಚ್ಚಿದ ಪೊಲೀಸ್ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 15:26 IST
Last Updated 25 ಏಪ್ರಿಲ್ 2020, 15:26 IST
ಸೇಡಂನ ಕಲಬುರ್ಗಿ ವೃತ್ತದಲ್ಲಿ ಪೊಲೀಸರು ಬೈಕ್ ಸವಾರರನ್ನು ತಡೆದು ವಿಚಾರಿಸುತ್ದಿತಿರುವುದು
ಸೇಡಂನ ಕಲಬುರ್ಗಿ ವೃತ್ತದಲ್ಲಿ ಪೊಲೀಸರು ಬೈಕ್ ಸವಾರರನ್ನು ತಡೆದು ವಿಚಾರಿಸುತ್ದಿತಿರುವುದು   

ಸೇಡಂ: ಕೊರೊನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೇಡಂ ತಾಲ್ಲೂಕಿನಾದ್ಯಂತ ಇನ್ನಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ತಾಲ್ಲೂಕಿನ ರಿಬ್ಬನಪಲ್ಲಿ, ಕುರಕುಂಟಾ, ಹಂದರಕಿ, ಆಡಕಿ, ಮಳಖೇಡ, ಮೇದಕ್, ಕಲಬುರ್ಗಿ ವೃತ್ತ, ಸೇಡಂನ ಚೌರಸ್ತಾ, ಚಿಂಚೋಳಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಪೊಲೀಸರು ಸರ್ಪಗಾವಲಿನಂತೆ ನಿಂತು ಸೇಡಂಗೆ ಬರುವ ಮತ್ತು ತೆರಳುವವರ ಮೇಲೆ ಹೆಚ್ಚಿನ ನಿಗಾವಹಿಸುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಉಪ ರಸ್ತೆಗಳ ಸಂಪರ್ಕಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಬಸ್ ‌ನಿಲ್ದಾಣದ ಮತ್ತು ಕಲಬುರ್ಗಿ ವೃತ್ತದ ಬಳಿ ಶಾಮಿಯಾನ ಮತ್ತು ಕುರ್ಚಿ- ಟೇಬಲ್ ಹಾಕಿ ಕುಳಿತು ನಿಗಾ ವಹಿಸುತ್ತಿದ್ದಾರೆ. ಅನಾವಶ್ಯಕವಾಗಿ ಅಲೆದಾಡುವ ಪುಢಾರಿಗಳನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಸೇಡಂ ಪೊಲೀಸರು ಯಶಸ್ವಿಯತ್ತ ಸಾಗುತ್ತಿದ್ದಾರೆ.

ADVERTISEMENT

ಪಾಸ್ ಹೊಂದಿರುವವರನ್ನು ಮಾತ್ರ ಸೇಡಂ ಪಟ್ಟಣದ ಒಳಗಡೆ ಪ್ರವೇಶಿಸಲು ಅನುಮತಿ ನೀಡುತ್ತಿದ್ದು, ಅನಾವಶ್ಯಕವಾಗಿ ಅವರೂ ಸಹ ಓಡಾಡಿದ್ದಲ್ಲಿ, ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.