ADVERTISEMENT

ಬಿತ್ತನೆ ಬೀಜ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:55 IST
Last Updated 5 ಜೂನ್ 2025, 15:55 IST
ಫೋಟೋ.1
ಫೋಟೋ.1   

ಶಹಾಬಾದ್: ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಉದ್ದು, ತೊಗರಿ, ಹೆಸರು ಬೀಜ ವಿತರಣೆಗೆ ತಾಲ್ಲೂಕ ಕೃಷಿ ಸಮಾಜದ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ ಗೋಳಾ(ಕೆ) ಚಾಲನೆ ನೀಡಿದರು.

ಕೃಷಿ ಅಧಿಕಾರಿ ಸುಷ್ಮಾ ಕಲಕೇರಿ ಮಾತನಾಡಿ, ‘ಬಿತ್ತನೆ ಬೀಜಗಳ ದಾಸ್ತಾನು ಇದೆ. ಕೃಷಿಕರಿಗೆ ಅವಶ್ಯಕತೆ ಅನುಗುಣವಾಗಿ ಬೀಜಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಚಂದ್ರಕಾಂತ ನಾಗಶೆಟ್ಟಿ, ತಾಲ್ಲೂಕು ಕಾರ್ಯದರ್ಶಿ ಸಿದ್ದಲಿಂಗ ಶೆಟ್ಟಿ, ಉಪಾಧ್ಯಕ್ಷ ಭೀಮರಾಯ ಮಡಿವಾಳ, ಖಜಾಂಚಿ ಹಣಮಂತ ಜೇರಟಗಿ ,ಕೃಷಿ ಅಧಿಕಾರಿ ಶಶಿಕಾಂತ ಭರಣಿ, ಸಿಬ್ಬಂದಿ ಅಂಬರೀಷ್, ರಂಜಿತಾ ಹಾಗೂ ರೈತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.