ಕಲಬುರಗಿ: ನಗರದ ಬಿದ್ದಾಪುರ ಕಾಲೊನಿಯಲ್ಲಿ ಶುಕ್ರವಾರ ಆದಿ ಶಂಕರಾಚಾರ್ಯರ ಅಷ್ಟೋತ್ತರ ಸೇವಾ ಸಮಿತಿ ಹಾಗೂ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠ ವತಿಯಿಂದ ಶಂಕರ ಜಯಂತಿ ಪ್ರಯುಕ್ತ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮ ನಡೆಯಿತು.
ನಗರದ ವೈದಿಕರು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ 13 ವಟುಗಳಿಗೆ ಉಪನಯನ (ಬ್ರಹ್ಮೋಪದೇಶ) ಮಾಡಲಾಯಿತು.
ಕಲಬುರಗಿ ನಗರ ಅಲ್ಲದೇ ಸಿಂದಗಿ, ಚಿತ್ತಾಪುರ, ಜಹೀರಾಬಾದ, ಹುಣಸಗಿ ಸೇರಿದಂತೆ ಇತರೆ ಗ್ರಾಮಗಳಿಂದ ವಟುಗಳು ಭಾಗವಹಿಸಿದ್ದರು.
ಸಂಜೆ ಜೇವರ್ಗಿ ಕಾಲೊನಿಯಿಂದ ಬಿದ್ದಾಪು ಕಾಲೊನಿವರೆಗೆ ಶೋಭಾ ಯಾತ್ರೆ ನಡೆಯಿತು ಎಂದು ಅಷ್ಟೋತ್ತರ ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಕುಲಕರ್ಣಿ ನಾಗೂರ ತಿಳಿಸಿದ್ದಾರೆ.
ರಮಾಕಾಂತ ಜೋಶಿ, ಶ್ರೀಪಾದ ಜೋಶಿ, ಸದಾನಂದ ಮೋಗೇಕರ್, ಕಿಶೋರ ಕುಲಕರ್ಣಿ ಗೂಳನೂರ, ವೇಣುಗೋಪಾಲ ಗೊಬ್ಬುರ, ದತ್ತಾತ್ರೇಯ ಭೀಸೆ, ದಿಗಂಬರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ನಾಲವಾರ, ಲಕ್ಷ್ಮಣಭಟ್ಟ ರಾಜ ಜೋಶಿ, ಬಿದ್ದಾಪುರ ಕಾಲೊನಿಯ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.