ADVERTISEMENT

ಶರಣಬಸವೇಶ್ವರ ಜಾತ್ರಾ ಮಹೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 14:09 IST
Last Updated 18 ಏಪ್ರಿಲ್ 2025, 14:09 IST

ಕಾಳಗಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಆರಾಧ್ಯದೈವ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಶುಕ್ರವಾರ (ಏ.18) ವಾದ್ಯ ವೈಭವಗಳ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಆರಂಭಗೊಂಡಿದ್ದು ಏ.23ರಂದು ಮುಕ್ತಾಯಗೊಳ್ಳಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಏ.21ರ ಬೆಳಿಗ್ಗೆ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ನಂತರ ಮಹಾಪ್ರಸಾದ ವಿತರಣೆ ಜರುಗಲಿದೆ. ಏ.22ರಂದು ಬೆಳಿಗ್ಗೆ 9 ಗಂಟೆಗೆ ಪುರವಂತರ ಮೆರವಣಿಗೆ ಮತ್ತು ಅವರ ಸೇವೆಯೊಂದಿಗೆ ರಾಚೋಟೇಶ್ವರ ಅಗ್ನಿಪ್ರವೇಶ ನಡೆಯಲಿದೆ. ಇದೇ ದಿನ ಸಂಜೆ 6 ಗಂಟೆಗೆ ರಥೋತ್ಸವ ಅದ್ದೂರಿಯಾಗಿ ಸಾಗಲಿದೆ. ಏ.23ರಂದು ಸಂಜೆ 5 ಗಂಟೆಗೆ ಭಕ್ತರ ಹಾಲ ಓಕಳಿ ನೆರವೇರಿ ಜಾತ್ರೆ ಸಂಪನ್ನಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT