ಕಲಬುರಗಿ ಶರಣ ಬಸವೇಶ್ವರ ದೇವಸ್ಥಾನಕ್ಕೆ ಸೋಮವಾರ ಹರಿದು ಬಂದ ಭಕ್ತರ ಸಾಗರ...
ಕಲಬುರಗಿ: ಪವಿತ್ರ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂತು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ನಡೆಯಿತು. ಉಭಯ ಶರಣರ ಗದ್ದುಗೆಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಜಿಲ್ಲೆ ಮಾತ್ರವಲ್ಲದೆ ನೆರೆಯ ಬೀದರ್, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಭಕ್ತರು ಬಂದು ಶರಣಬಸವೇಶ್ವರರ ದರ್ಶನ ಪಡೆದರು.
ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು, ಕಾಯಿ, ಕರ್ಪೂರ, ಬಿಲ್ವಪತ್ರೆ ಅರ್ಪಿಸಿ ಭಕ್ತಿಮೆರೆದರು.
ಶರಣ ಬಸವೇಶ್ವರರ ದರ್ಶನಕ್ಕೆ ಅನುಕೂಲ ಕಲ್ಪಿಸಲು ದೇವಸ್ಥಾನದಲ್ಲಿ ನಾಲ್ಕು ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಒಂದು ಗಣ್ಯರ ಸಾಲು, ಎರಡು ಗರ್ಭಗುಡಿ ಎದುರು ಪ್ರವೇಶ ಕಲ್ಪಿಸುವ ಸಾಲು ಹಾಗೂ ಮತ್ತೊಂದು ದೇವಸ್ಥಾನದ ಹೊರಗಿನಿಂದಲೇ ಕೈಮುಗಿದು ಭಕ್ತಿ ಅರ್ಪಿಸಲು ವ್ಯವಸ್ಥೆ ಮಾಡಲಾಗಿತ್ತು.
ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಉಭಯ ಶರಣರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿರುವುದು
ದಾಸೋಹ ಗುಣ ಅನಾವರಣ: ದಾಸೋಹಕ್ಕೆ ಹೆಸರಾದ ಶರಣ ಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ಭಕ್ತರ ದಾಸೋಹ ಗುಣ ಅನಾವರಣಗೊಂಡಿತು. ಭಕ್ತರು ತಮ್ಮ ಶಕ್ತ್ಯಾನುಸಾರ ವಿವಿಧ ಬಗೆಯ ಭಕ್ಷ್ಯಗಳನ್ನು ತಂದು ದೇವಸ್ಥಾನದ ಆವರಣದಲ್ಲಿ ವಿವಿಧೆಡೆಯಿಂದ ಬಂದಿದ್ದ ಸಹ ಭಕ್ತರಿಗೆ ಉಣಬಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.