ADVERTISEMENT

ಸಿದ್ದಯ್ಯಪ್ಪ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 3:25 IST
Last Updated 1 ನವೆಂಬರ್ 2020, 3:25 IST
ಸಿದ್ದಯ್ಯಪ್ಪ ಸ್ವಾಮೀಜಿ
ಸಿದ್ದಯ್ಯಪ್ಪ ಸ್ವಾಮೀಜಿ   

ಜೇವರ್ಗಿ: ತಾಲ್ಲೂಕಿನ ಕಟ್ಟಿಸಂಗಾವಿಯ (ಭೀಮಾ ಬ್ರಿಜ್) ಪ್ರಭು ಬಸಯ್ಯತಾ ತನವರ ಮಠದ ಪೀಠಾಧಿಪತಿ ಸಿದ್ದಯ್ಯಪ್ಪ ಸ್ವಾಮೀಜಿ (80) ಶನಿವಾರ ಬೆಳಗಿನ ಜಾವ ನಿಧನರಾದರು. ಶ್ರೀಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಶ್ರೀಮಠದ ಆವರಣದಲ್ಲಿ ಜರುಗಲಿದೆ.

ಲಿಂ.ಸಿದ್ದಯ್ಯಪ್ಪ ಸ್ವಾಮೀಜಿ ಸಂಸಾರಸ್ಥರಾಗಿದ್ದು, ಅವರಿಗೆ ಐವರು ಪುತ್ರರು ಇದ್ದಾರೆ. 55 ವರ್ಷಗಳಿಂದ ಶ್ರೀಮಠದ ಪೀಠಾಧಿಪತಿಯಾಗಿದ್ದರು. ಮಠದಲ್ಲಿ ನಿರಂತರವಾಗಿ ಅನ್ನ ದಾಸೋಹ ಸೇವೆ ನಡೆಸಿಕೊಂಡು ಬಂದಿದ್ದರು. ಜೇವರ್ಗಿ, ಕಟ್ಟಿಸಂಗಾವಿ, ಸೋಮನಾಥಹಳ್ಳಿ, ನಡುವಿನಹಳ್ಳಿ, ಕಡೆಹಳ್ಳಿ, ಚನ್ನೂರ, ಬುಟ್ನಾಳ, ಗೋಗಿ, ಹರನೂರ, ತಿಳಗುಳ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರೀಗಳಿಗೆ ಭಕ್ತರು ಇದ್ದಾರೆ. ಪ್ರತಿ ವರ್ಷ ಯುಗಾದಿ ನಂತರ 11ನೇ ದಿನಕ್ಕೆ ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಂಟೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪ್ರಭು ಬಸಯ್ಯ ತಾತನವರ ಜಾತ್ರೆ, ರಥೋತ್ಸವ ಹಾಗೂ ಧಾರ್ಮಿಕ ಸಭೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.